CrimeNational

ಸ್ಕೂಟರ್‌ನಲ್ಲಿ 7 ಮಕ್ಕಳನ್ನು ಕರೆದೊಯ್ದ ಮುನಾವರ್‌ ಶಾ ಅರೆಸ್ಟ್‌

ಮುಂಬೈ; ಸ್ಕೂಟರ್‌ನಲ್ಲಿ ಬರೋಬ್ಬರಿ ಏಳು ಮಕ್ಕಳನ್ನು ಒಟ್ಟಿಗೆ ಕೂರಿಸಿಕೊಂಡು ಕರೆದೊಯ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಮುನಾವರ್‌ ಶಾ ಎಂಬಾತ ತನ್ನ ನಾಲ್ವರು ಮಕ್ಕಳು ಹಾಗೂ ನೆರೆಹೊರೆಯರ ಮೂರು ಮಕ್ಕಳನ್ನು ತನ್ನ ಸ್ಕೂಟರ್‌ನಲ್ಲಿ ಒಟ್ಟಿಗೆ ಕೂರಿಸಿಕೊಂಡು ಕರೆದೊಯ್ದಿದ್ದ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿತ್ತು. ಈ ಬಗ್ಗೆ ಪೊಲೀಸರಿಗೂ ಟ್ಯಾಗ್‌ ಮಾಡಲಾಗಿತ್ತು. ಎಚ್ಚೆತ್ತ ಪೊಲೀಸರು, ಮುನಾವರ್‌ ಶಾನನ್ನು ಬಂಧಿಸಿದ್ದಾರೆ.

ಮುನಾವರ್‌ ಶಾ ತೆಂಗಿನಕಾಯಿ ಮಾರಾಟಗಾರನಾಗಿದ್ದು, ಮೋಜಿಗಾಗಿ ಹೀಗೆ ಮಾಡಿದ್ದ. ಇದನ್ನು ಸ್ಥಳೀಯರು ವಿಡಿಯೋ ಮಾಡಿಕೊಂಡು ವೈರಲ್‌ ಮಾಡಿದ್ದರು. ಇದರ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದರು. ಟ್ವಟಿರ್‌ನಲ್ಲಿ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದರು. ಎಚ್ಚೆತ್ತ ಪೊಲೀಸರು, ಮಕ್ಕಳನ್ನು ಸ್ಕೂಟರ್‌ನಲ್ಲಿ ಕರೆದೊಯ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

Share Post