CrimeNational

ದೆಹಲಿಯ ನಿರ್ಭಯಾ ರೀತಿ ಅತ್ಯಾಚಾರ; ಹೈದರಾಬಾದ್‌ನಲ್ಲಿ ಚಲಿಸುತ್ತಿದ್ದ ಬಸ್‌ನಲ್ಲೇ ರೇಪ್‌!

ಹೈದರಾಬಾದ್;‌ ದೆಹಲಿಯ ನಿರ್ಭಯಾ ಕೇಸ್‌ನಂತೆಯೇ ಹೈದರಾಬಾದ್‌ನಲ್ಲಿ ದಾರುಣ ಘಟನೆಯೊಂದು ನಡೆದಿದೆ.. ಚಲಿಸುತ್ತಿದ್ದ ಬಸ್‌ನಲ್ಲಿಯೇ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದೆ.. ಸೋಮವಾರ ರಾತ್ರಿ ಈ ಕೃತ್ಯ ಎಸಗಲಾಗಿದ್ದು, ಆರೋಪಿ ಓಡಿಹೋಗಿದ್ದಾನೆ..

ಇದನ್ನೂ ಓದಿ; ಹಳೆ ಲವರ್ ಗಾಗಿ ಗಂಡನ ಕೊಲೆ ಮಾಡಿಸಿದ ಯುವತಿ

ಹರಿಕೃಷ್ಣ ಟ್ರಾವೆಲ್ಸ್‌ ಗೆ ಸೇರಿದ ಬಸ್‌ ಚಾಲಕನೇ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.. ಕೂಲಿ ಮಾಡುವ 26 ವರ್ಷದ ಮಹಿಳೆ ತನ್ನ ಚಿಕ್ಕ ಮಗಳ ಜೊತೆ ನಿರ್ಮಲ್‌ನಿಂದ ಪ್ರಕಾಶಂ ಜಿಲ್ಲೆಯ ಪಾಮುರು ಕಡೆಗೆ ಹೋಗಲು ಹರಿಕೃಷ್ಣ ಬಸ್‌ ಹತ್ತಿದ್ದಾರೆ.. ಇದೇ ವೇಳೆ ಬಸ್‌ ಚಾಲಕ ರಾತ್ರಿ ಊಟದ ನಂತರ ಸಹ ಚಾಲಕನಿಗೆ ಬಸ್‌ ಓಡಿಸಲು ಕೊಟ್ಟು ಬಸ್‌ ಹಿಂಬದಿ ಸೀಟ್‌ಗೆ ಬಂದಿದ್ದಾನೆ.. ಅಲ್ಲಿದ್ದ ಕೂಲಿ ಕಾರ್ಮಿಕ ಮಹಿಳೆ ಮೇಲೆ ಆಕೆ ಪುಟ್ಟ ಮಗಳ ಮುಂದೆಯೇ ಅತ್ಯಾಚಾರ ಎಸಗಿದ್ದಾನೆ.. ಬಸ್‌ ಚಾಲನೆಯಲ್ಲಿರುವಾಗಲೇ ಈ ಕೃತ್ಯ ಎಸಗಲಾಗಿದೆ..

ಇದನ್ನೂ ಓದಿ; ಗಂಡ-ಮಕ್ಕಳನ್ನು ಬಿಟ್ಟು ಮಾವನೊಂದಿಗೆ ಓಡಿ ಹೋದ ಮಹಿಳೆ..!

ಮಹಿಳೆ ಬಾಯಿಗೆ ಬೆಡ್‌ಶೀಟ್‌ ತುರುಕಿ ಈ ಕೃಯ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.. ಇದೇ ವೇಳೆ ಮಹಿಳೆ ಮೇಲೆ ಹಲ್ಲೆ ಕೂಡಾ ನಡೆಸಲಾಗಿದೆ.. ಇನ್ನು ಘಟನೆಯ ನಂತರ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.. ಈ ವಿಷಯ ತಿಳಿಯುತ್ತಿದ್ದಂತೆ ಬಸ್‌ ಚಾಲಕ ಬಸ್‌ನಿಂದ ಇಳಿದು ಓಡಿಹೋಗಿದ್ದಾನೆ ಎಂದು ತಿಳಿದುಬಂದಿದೆ..
ಬಸ್‌ನಲ್ಲಿ 36 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.. ರಾತ್ರಿಯಾಗಿದ್ದರಿಂದ ಬಹುತೇಕರು ಮಲಗಿದ್ದರು.. ಜೊತೆಗೆ ಹಿಂಬದಿ ಸೀಟ್‌ನಲ್ಲಿ ಮಹಿಳೆಯ ಬಾಯಿಗೆ ಬೆಡ್‌ಶೀಟ್‌ ತುರುಕಿದ್ದರಿಂದ ಹಿಂದೆ ಏನು ನಡೆದಿದೆ ಎಂಬುದೇ ಬಸ್‌ನಲ್ಲಿದ್ದವರಿಗೆ ಅರ್ಥವಾಗಿಲ್ಲ.. ಮಹಿಳೆ ದೂರಿನ ಹಿನ್ನೆಲೆಯಲ್ಲಿ ಹಿಂಬಾಲಿಸಿದ ಪೊಲೀಸರು, ಬಸ್‌ ಚಾಲನೆ ಮಾಡುತ್ತಿದ್ದ ಸಹ ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.. ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..

ಇದನ್ನೂ ಓದಿ; ನಿಮ್ಮ ಗ್ರಹಿಕೆಗೊಂದು ಚಾಲೆಂಜ್‌; ಈ ಚಿತ್ರದಲ್ಲಿ ಎರಡು ಕುದುರೆ ಇದೆ, ಗುರುತಿಸಿ..

Share Post