CrimeNational

ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಮಾಹಿತಿ; ಜಮ್ಮು-ಕಾಶ್ಮೀರದಲ್ಲಿ ಶೋಧ

ಶ್ರೀನಗರ; ಉಗ್ರರಿಗೆ ಭಯೋತ್ಪಾದನೆ ಚಟುವಟಿಕೆ ನಡೆಸಲು ಆರ್ಥಿಕ ನೆರವು ನೀಡಿದ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಶೋಧಕಾರ್ಯ ನಡೆಸಿದ್ದಾರೆ. ಪೊಲೀಸರು ಹಾಗೂ ಸಿಆರ್‌ಪಿಎಫ್‌ ಸಿಬ್ಬಂದಿ ಜೊತೆ ಸೇರಿ ಎನ್ಐಎ ಅಧಿಕಾರಿಗಳು ಈ ಶೋಧ ಕಾರ್ಯ ನಡೆಸಿದ್ದಾರೆ. ಜಮ್ಮು ಭಾಗದ ಪೂಂಚ್‌, ರಾಜೌರಿ ಮತ್ತು ಕಾಶ್ಮೀರದ ಪುಲ್ವಾಮಾ, ಶೋಪಿಯಾನ್‌, ಶ್ರೀನಗರ, ಬುದಗಾಮ್‌, ಬಂಡಿಪೋರಾ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಶೋಧ ನಡೆಯುತ್ತಿದೆ.

ಧಾರ್ಮಿಕ ಪ್ರಚಾರಕ ದಾರುಲ್‌–ಉಲ್‌–ಉಲೂಮ್‌ ರಹೀಮಿಯಾ, ಮೌಲಾನಾ ರೆಹಮತುಲ್ಲಾ ಖಾಸ್ಮಿ ಮತ್ತು ಎನ್‌ಐಟಿ ಶ್ರೀನಗರದ ಪ್ರಾಧ್ಯಾಪಕ ಸಮಮ್‌ ಅಹ್ಮದ್‌ ಲೋನೆ ಸೇರಿದಂತೆ ಹಲವರ ಮನೆಯಗಳಲ್ಲಿ ತಪಾಸಣೆ ಮಾಡಲಾಗಿದೆ. ಉಗ್ರರಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರ ಚಟುವಟಿಕೆಗಳಿಗೆ ಹಣಕಾಸು ನೆರವು, ಆತ್ಮಾಹುತಿ ದಾಳಿ ಪ್ರಕರಣಗಳಿಗೆ ಸಂಬಂಧಿಸಿ ಎನ್‌ಐಎ, ಜಮ್ಮು ಮತ್ತು ಕಾಶ್ಮೀರದಲ್ಲಿ 2017ರಿಂದ ನಿರಂತರವಾಗಿ ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಸಾಕಷ್ಟು ಜನರನ್ನು ಬಂಧಿಸಿ ವಿಚಾರಣೆಗೂ ಒಳಪಡಿಸಿದೆ.

Share Post