BengaluruCrime

ಪ್ಯಾಂಟ್‌ ಜಿಪ್‌ನಲ್ಲಿ ಚಿನ್ನ ಕಳ್ಳಸಾಗಣೆ; ಸಿಕ್ಕಿಬಿದ್ದ ಆಸಾಮಿ

ಬೆಂಗಳೂರು; ವಿದೇಶದಿಂದ ಕಸ್ಟಮ್ಸ್‌ ಅಧಿಕಾರಿಗಳ ಕಣ್ತಪ್ಪಿಸಿ ಯಾವ್ಯಾವುದೋ ರೂಪದಲ್ಲಿ ಚಿನ್ನವನ್ನು ಕಳ್ಳತನದಿಂದ ತರುತ್ತಿರುತ್ತಾರೆ. ಕೆಲವರು ಆಗಾಗ ಸಿಕ್ಕಿಬೀಳುತ್ತಿರುತ್ತಾರೆ. ಕಸ್ಟಮ್ಸ್‌ ಅಧಿಕಾರಿಗಳು ಅದೆಲ್ಲಿ ಬಚ್ಚಿಟ್ಟುಕೊಂಡು ಚಿನ್ನ ತಂದರೂ ಅದನ್ನು ಪತ್ತೆ ಹಚ್ಚಿಬಿಡುತ್ತಾರೆ. ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬ ಚಿನ್ನವನ್ನು ತನ್ನ ಪ್ಯಾಂಟ್‌ನ ಜಿಪ್‌ನಲ್ಲಿ ಬಚ್ಚಿಟ್ಟುಕೊಂಡು ತಂದಿದ್ದ. ಪರಿಶೀಲನೆ ವೇಳೆ ಆತ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಈತ ಶಾರ್ಜಾದಿಂದ ಬೆಂಗಳೂರಿಗೆ ಬಂದಿಳಿದಿದ್ದ. ಪೇಸ್ಟ್‌ ರೂಪದಲ್ಲಿ ಚಿನ್ನವನ್ನು ಪ್ಯಾಂಟ್‌ ಜಿಪ್‌ ನ ಪಕ್ಕದ ಜಾಗದಲ್ಲಿ ಇಟ್ಟುಕೊಂಡಿದ್ದ.  ಈತನನ್ನು ಏರ್‌ಪೋರ್ಟ್‌ನಲ್ಲಿ ಏರ್‌ ಕಸ್ಟಮ್ಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಈ ವೇಳೆ ಚಿನ್ನ ಕಳ್ಳ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ.

ಸುಮಾರು 18.57 ಲಕ್ಷ ರೂಪಾಯಿ ಮೌಲ್ಯದ 284 ಗ್ರಾಂ ಚಿನ್ನವನ್ನು ಆತ ಸುಂಕವಿಲ್ಲದೆ ಕಳ್ಳತನವಾಗಿ ಭಾರತಕ್ಕೆ ತರಲು ಪ್ರಯತ್ನಿಸಿದ್ದ ಎಂದು ತಿಳಿದುಬಂದಿದೆ. ಚಿನ್ನದ ಜೊತೆ ಪ್ರಯಾಣಿಕ ಸಿಗರೇಟ್ ಸ್ಟಿಕ್ ಹಾಗೂ ಸೌಂದರ್ಯವರ್ಧಕ ಪಾಕೇಟ್ ಸಾಗಾಟ ಮಾಡುತ್ತಿದ್ದ. 3,300 ಸಿಗರೇಟ್ ಸ್ಟಿಕ್ ಮತ್ತು 324 ಸೌಂದರ್ಯವರ್ಧಕ ಪಾಕೇಟ್‌ಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Share Post