Districts

189 ಗ್ರಾಮಗಳ ಇತಿಹಾಸ ಬರೆಯಲು ಹೊರಟ ಗ್ರಾಮ ಲೆಕ್ಕಿಗ

ಚಾಮರಾಜನಗರ; ಸರ್ಕಾರಿ ಉದ್ಯೋಗಿಗಳು ತಮ್ಮ ಕೆಲಸದ ಸಮಯದಲ್ಲೇ ಸರಿಯಾಗಿ ಮಾಡೋದಿಲ್ಲ. ಆದರೆ ಇಲ್ಲೊಬ್ಬ  ಗ್ರಾಮ ಲೆಕ್ಕಿಗ ಬರೋಬ್ಬರಿ ೧೮೯ ಗ್ರಾಮಗಳ ಇತಿಹಾಸ ಬರೆಯಲು ಹೊರಟಿದ್ದಾರೆ.  ಈಗಿನ ವಿಜಯನಗರ ಜಿಲ್ಲೆಗೆ ಸೇರಿದ ಈಚಲಬೊಮ್ಮನಹಳ್ಳಿ ಗ್ರಾಮದ ಶ್ರೀಧರ್ ಅವರು ಸದ್ಯ ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ ಗ್ರಾಮ ಲೆಕ್ಕಿಗನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ತಮ್ಮ ಕೆಲಸದ ಜೊತೆಗೆ ಚಾಮರಾಜನಗರ ತಾಲೂಕಿನ ಪ್ರತಿ ಹಳ್ಳಿಗಳ ಇತಿಹಾಸ ಹೇಳಲು ಹೊರಟಿದಿದ್ದಾರೆ.

   ಚಾಮರಾಜನಗರ ತಾಲೂಕಿ‌ನಲ್ಲಿರುವ ಕಂದಾಯ ಗ್ರಾಮಗಳು, ಬೇಚರಾಕ್ ಹಾಗೂ ನಶಿಸಿಹೋಗಿರುವ ಹಳ್ಳಿಗಳು ಸೇರಿದಂತೆ ಒಟ್ಟು 189 ಊರುಗಳ ಚರಿತ್ರೆಯನ್ನು ಶ್ರೀಧರ್‌ ಸಂಗ್ರಹಿಸುತ್ತಿದ್ದಾರೆ. ಅದನ್ನು ಪುಸ್ತಕ ರೂಪದಲ್ಲಿ ತರಲು ಮುಂದಾಗಿದ್ದು, ಪುಸ್ತಕಕ್ಕೆ ‘ಚಾಮರಾಜನಗರ ದರ್ಶನಂ’ ಎಂದು ಹೆಸರಿಟ್ಟಿದ್ದಾರೆ. ಈಗಾಗಲೇ ಅಧ್ಯಯನ ಬಹುತೇಕ ಮುಗಿದಿದ್ದು, ಕೆಲವೇ ದಿನಗಳಲ್ಲಿ ಈ ಕೃತಿ ಬಿಡುಗಡೆಯಾಗಲಿದೆ‌ ಎಂದು ತಿಳಿದುಬಂದಿದೆ.

Share Post