NationalPolitics

Congress Protest; ಕಾಂಗ್ರೆಸ್ಸಿಗರ ಪ್ರತಿಭಟನೆಗೆ ಅರ್ಧ ಗಂಟೆ ಮಾತ್ರ ಅವಕಾಶ!

ನವದೆಹಲಿ; ಕೇಂದ್ರ ಸರ್ಕಾರ  ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣ ನೀಡುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರ ದೆಹಲಿಯಲ್ಲಿ ಇವತ್ತು ಪ್ರತಿಭಟನೆ ಹಮ್ಮಿಕೊಂಡಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ. ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ಶುರುವಾಗಲಿದೆ. ಆದ್ರೆ ಈ ಪ್ರತಿಭಟನೆ ಹೆಚ್ಚು ಹೊತ್ತು ನಡೆಸೋದಕ್ಕೆ ಅವಕಾಶವಿಲ್ಲ.

ಕೇವಲ ಅರ್ಧ ಗಂಟೆ ಅವಕಾಶ ಕೊಟ್ಟ ದೆಹಲಿ ಪೊಲೀಸರು

ರಾಜ್ಯದ ಎಲ್ಲಾ ಕಾಂಗ್ರೆಸ್‌ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು, ಸಚಿವರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ತುಂಬಾ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ವೇದಿಕೆ ಎಲ್ಲಾ ಹಾಕಲಾಗಿದೆ. ಆದ್ರೆ ಈ ಪ್ರತಿಭಟನೆಗೆ ದೆಹಲಿ ಪೊಲೀಸರು ಹೆಚ್ಚು ಹೊತ್ತು ಅವಕಾಶ ಕೊಟ್ಟಿಲ್ಲ. ನೀವು ಏನೇ ಪ್ರತಿಭಟನೆ ಮಾಡಿದರೂ ಅರ್ಧ ಗಂಟೆ ಒಳಗೆ ಮುಗಿಸಿ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಅಂದರೆ ಬೆಳಗ್ಗೆ 12 ಗಂಟೆಗೆ ಪ್ರತಿಭಟನೆ ಶುರು ಮಾಡಿ 12.30ಕ್ಕೆ ಮುಗಿಸಿಬಿಡಿ ಎಂದು ದೆಹಲಿ ಪೊಲೀಸರು ಸೂಚನೆ ಕೊಟ್ಟಿದ್ದಾರೆ.

ಆದರೆ ಬೆಂಗಳೂರಿನಿಂದ ನೂರಾರು ಕಾಂಗ್ರೆಸ್‌ ನಾಯಕರು ಅಲ್ಲಿಗೆ ಹೋಗಿದ್ದಾರೆ. ಬೃಹತ್‌ ವೇದಿಕೆ, ಪೆಂಡಾಲ್‌ ಎಲ್ಲಾ ಹಾಕಿದ್ದಾರೆ. ಅರ್ಧ ಗಂಟೆಯಲ್ಲಿ ಒಬ್ಬ ನಾಯಕ ಭಾಷಣ ಮಾಡೋದಕ್ಕೂ ಆಗೋದಿಲ್ಲ. ಹೀಗಾಗಿ, ಕಾಂಗ್ರೆಸ್‌ ನಾಯಕರು ಸಂಜೆವರೆಗೆ ಪ್ರತಿಭಟನೆ ಮುಂದುವರೆಸಲು ಪ್ರಯತ್ನಿಸಬಹುದು.

ಪ್ರತಿಭಟನೆ ಮುಂದುವರೆಸಿದರೆ ಕಾಂಗ್ರೆಸ್‌ ನಾಯಕರು ಅರೆಸ್ಟ್‌

ಪೊಲೀಸರೇನೋ ಅರ್ಧ ಗಂಟೆ ಮಾತ್ರ ಅನುಮತಿ ಕೊಟ್ಟಿದ್ದಾರೆ. ಆದ್ರೆ ಪ್ರತಿಭಟನಾಕಾರರು ಇದನ್ನು ಕೇಳೋದಿಲ್ಲ. ಆದ್ರೆ ದೆಹಲಿ ಪೊಲೀಸರೂ ಪ್ರತಿಭಟನೆ ಮುಂದುವರೆಸೋದಕ್ಕೆ ಅವಕಾಶ ಕೊಡೋದು ಡೌಟು. ಹೀಗಾಗಿ, ಪ್ರತಿಭಟನೆ ಮುಂದುವರೆಸಿದರೆ ಪೊಲೀಸರು ನಾಯಕರನ್ನು ಬಂಧಿಸುವ ಸಾಧ್ಯತೆ ಇದೆ. ಹಾಗೇನಾದರೂ ಆದರೆ, ನಾಯಕರು ಪ್ರತಿರೋಧ ವ್ಯಕ್ತಪಡಿಸಬಹುದು. ಇದರಿಂದಾಗಿ ಮಾತನ ಚಕಮಕಿ ಕೂಡಾ ಆಗಬಹುದು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಕೂಡಾ ಹಾಕಲಾಗಿದೆ.

ಪ್ರತಿಭಟನೆಗೆ ಕನ್ನಡದ ಟಚ್‌

ಇಂದಿನ ಕಾಂಗ್ರೆಸ್‌ ಸರ್ಕಾರದ ಪ್ರತಿಭಟನೆಗೆ ಕನ್ನಡ ಟಚ್ ಕೊಡಲಾಗುತ್ತಿದೆ. ಇದಕ್ಕಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನೂರಾರು ಕನ್ನಡ ಬಾವುಟಗಳನ್ನ ದೆಹಲಿಗೆ ತಂದಿದ್ದಾರೆ. ಕನ್ನಡಿಗರ ಅಸ್ಮಿತೆ, ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಅಸ್ತ್ರವನ್ನು ಪ್ರತಿಭಟನೆಯಲ್ಲಿ ಪ್ರಯೋಗಿಸಲಾಗುತ್ತದೆ. ಈ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುವುದರ ಜೊತೆಗೆ ಕನ್ನಡಿಗರ ಹೃದಯ ಗೆಲ್ಲೋ ಪ್ರಯತ್ನ ಕೂಡಾ ನಡೆಯಲಿದೆ.

 

Share Post