CrimeNational

ಸ್ಕ್ರೂ ಡ್ರೈವರ್‌ನಿಂದ ತಲೆಗೆ ಚುಚ್ಚಿ ಚುಚ್ಚಿ ಪತ್ನಿಯ ಬರ್ಬರ ಹತ್ಯೆ!

ಲಖನೌ; ಉತ್ತರ ಪ್ರದೇಶದಲ್ಲಿ ಪಾಪಿ ಗಂಡನೊಬ್ಬ ತನ್ನ ಪತ್ನಿಯ ತಲೆಗೆ ಸ್ಕ್ರೂಡ್ರೈವರ್‌ನಿಂದ ಚುಚ್ಚಿ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.. ಉತ್ತರ ಪ್ರದೇಶದ ಮೀರತ್​​ನ ಜೈಭೀಮ್‌ಗರ್​ನಲ್ಲಿ ಇಂತಹದ್ದೊಂದು ದಾರುಣ ಘಟನೆ ನಡೆದಿದೆ.. ರಕ್ತ ಸುರಿಯುತ್ತಾ ಪತ್ನಿ ಕಿರುಚಾಡುತ್ತಿದ್ದರೂ 20ಕ್ಕೂ ಹೆಚ್ಚು ಬಾರಿ ಸ್ಕ್ರೂಡ್ರೈವರ್‌ನಿಂದ ಚುಚ್ಚಿ ದಾರುಣವಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ..

ಹತ್ತು ವರ್ಷಗಳ ಹಿಂದೆ ದೀಪಾ ಹಾಗೂ ಲಲಿತ್‌ ಎಂಬುವವರು ಮದುವೆಯಾಗಿದ್ದರು.. ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ.. ಇತ್ತೀಚೆಗೆ ಕೆಲ ದಿನಗಳಿಂದ ಲಲಿತ್‌ ತನ್ನ ಪತ್ನಿ ದೀಪಾ ಮೇಲೆ ಅನುಮಾನ ಪಡುತ್ತಿದ್ದ.. ಫೇಸ್‌ಬುಕ್‌ ನಲ್ಲಿ ಫೋಟೋ ಒಂದು ಷೇರ್‌ ಮಾಡಿದ್ದರ ವಿಚಾರವಾಗಿ ಇಬ್ಬರ ನಡುವೆ ಭಾರಿ ಜಗಳವಾಗಿದೆ.. ಇದೇ ಕಾರಣಕ್ಕೆ ಇಬ್ಬರೂ ಜೋರಾಗಿ ಕಿರುಚಾಡಿಕೊಂಡಿದ್ದಾರೆ.. ಇದು ವಿಕೋಪಕ್ಕೆ ತಿರುಗಿ, ಲಲಿತ್‌ ತನ್ನ ಪತ್ನಿಯ ತಲೆಗೆ ಸ್ಕ್ರೂಡ್ರೈವರ್‌ನಿಂದ ಚುಚ್ಚಿದ್ದಾನೆ..

ತಲೆಗೆ ಪಟ್ಟಾಗಿ ರಕ್ತ ಸೋರುತ್ತಿದ್ದರೂ ಬಿಡದ ಲಲಿತ್‌, ದೀಪಾ ತಲೆಗೆ ಪದೇ ಪದೇ ಚುಚ್ಚಿದ್ದಾನೆ.. ಸುಮಾರು 20ಕ್ಕೂ ಹೆಚ್ಚು ಬಾರಿ ಚುಚ್ಚಿ ಸಾಯಿಸಿದ್ದಾನೆ.. ಈ ವೇಳೆ ದೀಪಾ ರಕ್ಷಣೆ ಮಾಡುವಂತೆ ಜೋರಾಗಿ ಕಿರುಚಿಕೊಂಡಿದಾಳೆ.. ಆದ್ರೆ ಭಯದಿಂದ ಯಾರೂ ಹತ್ತಿರಕ್ಕೆ ಬಂದಿಲ್ಲ.. ಮೊದಲಿಗೆ ಜಮೀನು ವಿಚಾರದಲ್ಲಿ ಇಬ್ಬರು ನಡುವೆ ಗಲಾಟೆಯಾಗುತ್ತಿತ್ತಂತೆ.. ಅನಂತರ ಲಲಿತ್‌ ಹೆಂಡತಿ ಶೀಲದ ಮೇಲೆಯೇ ಅನುಮಾನ ಪಡೋಕೆ ಶುರು ಮಾಡಿದ್ದನಂತೆ..

 

Share Post