LifestyleNational

Love Tax; ತಮಿಳಿನಾಡಿನ ಈ ಗ್ರಾಮದಲ್ಲಿ ʻಲವ್‌ ಟ್ಯಾಕ್ಸ್‌ʼ ಕಟ್ಟಬೇಕು!; ತೆರಿಗೆ ಕಟ್ಟದಿದ್ದರೆ ಬಹಿಷ್ಕಾರ!

ನೀರಿಗೆ, ಪಾರ್ಕಿಂಗ್‌, ಭೂಮಿಗೆ ಟ್ಯಾಕ್ಸ್‌ ಕಟ್ಟೋದನ್ನು ನೋಡಿದ್ದೇವೆ.. ಆದ್ರೆ ತಮಿಳುನಾಡಿನಲ್ಲಿ ಪ್ರೀತಿ ಮಾಡೋದಕ್ಕೂ ಟ್ಯಾಕ್ಸ್‌ ಕಟ್ಟಬೇಕಂತೆ..! ವಿಚಿತ್ರ ಎನಿಸಿದರೂ ಇದು ನಿಜವೇ ಆಗಿದೆ.. ತಮಿಳುನಾಡಿನ ಕೊಯಮತ್ತೂರು ಸಮೀಪದ ಹಳ್ಳಿಯೊಂದರಲ್ಲಿ ಇಂತಹದ್ದೊಂದು ವಿಚಿತ್ರ ತೆರಿಗೆ ವಿಧಿಸಲಾಗುತ್ತದೆ.. ಈ ಗ್ರಾಮದಲ್ಲಿ ಯಾರಾದ್ರೂ ಪ್ರೀತಿಸಿ ಮದುವೆಯಾಗಿ ಬಂದರೆ, ಕಡ್ಡಾಯವಾಗಿ ಲವ್‌ ಟ್ಯಾಕ್ಸ್‌ ಕಟ್ಟಲೇಬೇಕು.. ಇಲ್ಲದಿದ್ದರೆ ಗ್ರಾಮದಿಂದ ಅವರಿಗೆ ಬಹಿಷ್ಕಾರ ಹಾಕಲಾಗುತ್ತದೆ..

ಈ ತೆರಿಗೆ ಪದ್ಧತಿಯನ್ನು  ‘ಕುತ್ರ ವಾರಿ’ ಎಂದು ಕರೆಯುತ್ತಾರೆ. ತಮಿಳಿನಲ್ಲಿ ʻಕುತ್ರʼ ಎಂದರೆ ಅಪರಾಧ, ʻವರಿʼ ಎಂದರೆ ತೆರಿಗೆ ಎಂದರ್ಥ. ಕೊಯಮತ್ತೂರು ಜಿಲ್ಲೆ ಅಣ್ಣೂರು ಸಮೀಪದ ವಡಕ್ಕಲೂರು ಎಂಬ ಗ್ರಾಮದಲ್ಲಿ ಇಂತಹದ್ದೊಂದು ವಿಚಿತ್ರ ಆಚರಣೆ ಇದೆ.. ಈ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗಳಿಗೆ ಗ್ರಾಮಸ್ಥರು ಊರಿಗೆ ಸೇರಿಸಿಕೊಳ್ಳುತ್ತಿಲ್ಲ.. ಊರಿಗೆ ಎಂಟ್ರಿ ಸಿಗಬೇಕೆಂದರೆ ಟ್ಯಾಕ್ಸ್‌ ಕಟ್ಟಬೇಕು.. ಪ್ರೇಮ ವಿವಾಹವಾದ ಜೋಡಿಗಳನ್ನು ‘ಕುತ್ರ ವರಿ’ (ಅಪರಾಧ ತೆರಿಗೆ) ಪಾವತಿಸಿ ಗ್ರಾಮಕ್ಕೆ ಪ್ರವೇಶಿಸುವ ಪರಿಪಾಠ ದಶಕಗಳಿಂದ ನಡೆಯುತ್ತಾ ಬಂದಿದೆ..

ವಡಕ್ಕಲೂರು ಗ್ರಾಮದಲ್ಲಿ ಬಹುತೇಕ ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರೇ ಹೆಚ್ಚಿದ್ದಾರೆ.. ಈಗಲೂ ಅಲ್ಲಿ ಅನಕ್ಷರತೆ ಬಡತನ ತಾಂಡವವಾಡುತ್ತಿದೆ.. ಹೀಗಾಗಿ ದಶಕಗಳಿಂದ ಬಂದ ಆಚರಣೆಯನ್ನು ಈಗಲೂ ಮುಂದುವರೆಸಿದ್ದಾರೆ.. ಈ ಗ್ರಾಮದಲ್ಲಿ 220 ಮನೆಗಳಿದ್ದು, ಊರಿನಲ್ಲಿ ಯಾರಾದರೂ ಪ್ರೇಮ ವಿವಾಹವಾದರೆ, ಅವರಿಗೆ ಹಲವಾರು ಷರತ್ತುಗಳನ್ನು ವಿಧಿಸಲಾಗುತ್ತದೆ.. ಗ್ರಾಮ ದೇವರಾದ ಕರುಪ್ಪರಾಯನ ದೇವಸ್ಥಾನಕ್ಕೂ ನಿಷೇಧ ಹೇರಲಾಗುತ್ತಿದೆ.. ಇದರ ಜೊತೆ ಟ್ಯಾಕ್ಸ್‌ ಕಟ್ಟಿದರೆ ಮಾತ್ರ ಗ್ರಾಮಕ್ಕೆ ಪ್ರವೇಶ ನೀಡಲಾಗುತ್ತದೆ ಎಂಬ ಆರೋಪವಿದೆ..

ಈ ಮಾಹಿತಿ ಅರಿತ ಕೊಯಮತ್ತೂರಿನ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಟ್ಯಾಕ್ಸ್‌ ಹಾಕುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ..

 

Share Post