ಬೈಕ್ ಬೆಲೆಯೇ 30 ಸಾವಿರ, ಆದ್ರೆ ಫೈನ್ 1 ಲಕ್ಷದ 34 ಸಾವಿರ !
ಬೆಂಗಳೂರು; ಬೆಂಗಳೂರಲ್ಲಿ ಟ್ರಾಫಿಕ್ ರೂಲ್ಸ್ ಸಾಕಷ್ಟು ಕಠಿಣವಾಗಿವೆ. ರೂಲ್ಸ್ ಬ್ರೇಕ್ ಮಾಡಿದರೆ, ಅದು ಟ್ರಾಫಿಕ್ ಪೊಲೀಸರು ಅಳವಡಿಸಿರುವ ಕ್ಯಾಮರಾದಲ್ಲಿ ಸೆರೆಯಾಗಿರುತ್ತದೆ. ಜೊತೆಗೆ ವಾಹನದ ಹೆಸರಿಗೆ ಫೈನ್ ಸೇರ್ಪಡೆಯಾಗಿರುತ್ತದೆ. ಸಿಕ್ಕಿಬಿದ್ದಾಗ ಹಿಂದೆ ಯಾವೆಲ್ಲಾ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದೇವೋ ಅದಕ್ಕೆಲ್ಲಾ ಫೈನ್ ಕಟ್ಟಬೇಕಾಗುತ್ತದೆ. ಹೀಗೆ ಒಬ್ಬ ವ್ಯಕ್ತಿ ಸಿಕ್ಕಿಬಿದ್ದಿದ್ದು, ಆತ ಸ್ಕೂಟರ್‌ಗೆ ಇದುವರೆಗೆ 1 ಲಕ್ಷದ 34 ಸಾವಿರ ರೂಪಾಯಿ ಫೈನ್ ಬಿದ್ದಿದೆ. ಅದನ್ನು ಕಟ್ಟಲಾಗದೇ ಆತ ಸ್ಕೂಟರ್ ಅನ್ನು ಪೊಲೀಸರಿಗೆ ಒಪ್ಪಿಸಿ ಹೋಗಿದ್ದಾನೆ.
ಜಯನಗರದ ಏಳುಮಲೈ ಎಂಬುವವರಿಗೆ ಸೇರಿದ ಸ್ಕೂಟರ್ ಇದಾಗಿದೆ. ಇದರ ಬೆಲೆ ಈಗ 30 ಸಾವಿರ ರೂಪಾಯಿ. ಆದ್ರೆ ಇದರ ಮೇಲೆ 1.34 ಲಕ್ಷ ರೂಪಾಯಿ ಫೈನ್ ಇದೆ. ಜೆಪಿ ನಗರದ ರಾಗಿಗುಡ್ಡ ಬಳಿ ಟ್ರಾಫಿಕ್ ಪೊಲೀಸರು ವಾಹನ ತಡೆದು ತಪಾಸಣೆ ಮಾಡಿದಾಗ, ಏಳುಮಲೈ ಸಾಕಷ್ಟು ಬಾರಿ ರೂಲ್ಸ್ ಬ್ರೇಕ್ ಮಾಡಿರುವುದು ಗೊತ್ತಾಗಿದೆ. ಈ ಸ್ಕೂಟರ್ ಮೇಲೆ ಬರೋಬ್ಬರಿ 255 ಕೇಸ್ ಇವೆಯಂತೆ.