CrimeNational

ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ರಕ್ಷಿಸಿದ ಶಾಸಕ..!

ಗಾಂಧಿನಗರ; ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ರಕ್ಷಣೆ ಮಾಡುವ ಮೂಲಕ ಶಾಸಕರೊಬ್ಬರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಟ್ವಾ ಗ್ರಾಮದ ಸಮುದ್ರ ತೀರದಲ್ಲಿರುವ ಹೊಳೆಯಲ್ಲಿ ಸ್ನಾನ ಮಾಡಲು ನಾಲ್ವರು ಯುವಕರು ಹೋಗಿದ್ದರು. ಈ ವೇಳೆ ಅಲೆಯ ಸೆಳೆತಕ್ಕೆ ಮೂವರು ಯುವಕರು ಸಿಲುಕಿದ್ದರು. ಈ ಬಗ್ಗೆ ತಿಳಿದ ರಾಜುಲಾ ನಗರದ ಬಿಜೆಪಿ ಶಾಸಕ ಹೀರಾ ಸೋಲಂಕಿ ಸ್ಥಳಕ್ಕೆ ಬಂದು ಯುವಕರನ್ನು ರಕ್ಷಣೆ ಮಾಡಿದ್ದಾರೆ.

ನಾಲ್ವರು ಯುವಕರಲ್ಲಿ ಮೂವರನ್ನು ರಕ್ಷಣೆ ಮಾಡಲಾಗಿದೆ. ಇನ್ನೊಬ್ಬ ಯುವಕನನ್ನು ರಕ್ಷಣೆ ಮಾಡಲು ಆಗಿಲ್ಲ. ಹಲವು ಗಂಟೆಗಳ ಹುಡುಕಾಟದ ನಂತರ ಆತನ ಮೃತದೇಹ ಪತ್ತೆಯಾಗಿದೆ. ಸದ್ಯ ಸೋಲಂಕಿ ಯುವಕರನ್ನು ರಕ್ಷಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Share Post