Karnataka Election; ಬುಧವಾರ ಮತದಾನ; ಭದ್ರತೆ ಹೇಗಿದೆ ಗೊತ್ತಾ..?
ಬೆಂಗಳೂರು; ಬುಧವಾರ ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಮಾಡಲಾಗುತ್ತಿದೆ. ಅದಕ್ಕಾಗಿ ಸುಮಾರು 1.60 ಲಕ್ಷ ಸಿಬ್ಬಂದಿಯನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿದೆ.
ಈ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಭದ್ರತಾ ಕಾರ್ಯದಲ್ಲಿರುವ ಒಟ್ಟು ಸಿಬ್ಬಂದಿ – 1.60 ಲಕ್ಷ
ಡಿವೈಎಸ್ಪಿ – 304 ಮಂದಿ
ಪೊಲೀಸ್ ಇನ್ಸ್ಪೆಕ್ಟರ್ – 991 ಮಂದಿ
ಪಿಎಸ್ಐ – 2,610 ಮಂದಿ
ಎಎಸ್ಐ – 5,803 ಮಂದಿ
ಇತರೆ ಸಿಬ್ಬಂದಿ – 84,000 ಮಂದಿ
ಹೋಂಗಾರ್ಡ್ – 8,500 ಮಂದಿ
ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ತುಕಡಿ – 650
ಹೆಚ್ಚಿನ ಭದ್ರತೆಗಾಗಿ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಗೋವಾ ಭದ್ರತಾ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಭದ್ರತೆ ಯಾವತ್ತೂ ಮಾಡಿರಲಿಲ್ಲ ಎಂದು ಹೇಳಲಾಗುತ್ತಿದೆ.
– ವರುಣಾ, ಚಾಮುಂಡೇಶ್ವರಿ, ಹಾಸನ, ಚನ್ನಪಟ್ಟಣದಲ್ಲಿ ಹೆಚ್ಚಿನ ನಿಗಾ
– 11,617 ಸೂಕ್ಷ್ಮ ಮತಗಟ್ಟೆಗಳು
ಬೆಂಗಳೂರಿನಲ್ಲಿ ಹೇಗಿದೆ ಪೊಲೀಸ್ ಭದ್ರತೆ?
ಬೆಂಗಳೂರು ನಗರದ್ಯಾಂತ 16 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. 13 ಸಾವಿರ ಪೊಲೀಸರು, KSRP ಹಾಗೂ ಹೋಮ್ ಗಾರ್ಡ್ಗಳು ಸೇರಿದಂತೆ ಒಟ್ಟು 16 ಸಾವಿರ ಸಿಬ್ಬಂದಿ. ಬೆಂಗಳೂರು ನಗರದಲ್ಲಿ ಒಟ್ಟು 7916 ಮತಗಟ್ಟೆಗಳಿವೆ. ಅದರಲ್ಲಿ 1907 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಅತಿಸೂಕ್ಷ್ಮ ಪ್ರದೇಶಗಳಲ್ಲಿ BSF, RPF, CRPF ಹಾಗೂ SAP ನಿಯೋಜನೆ ಮಾಡಲಾಗಿದೆ.