ಸ್ವಲ್ಪ ಯಾಮಾರಿದ್ರೂ ದರ್ಶನ್ ಕೇಸ್ ಹಾದಿ ತಪ್ಪುತ್ತಿತ್ತು; ಕಮೀಷನರ್ ದಯಾನಂದ್
ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೊಂಚ ನಿರ್ಲಕ್ಷ್ಯ ಮಾಡಿದ್ದರೂ ಎಲ್ಲರೂ ಎಡವಟ್ಟಾಗುತ್ತಿತ್ತು.. ನಮ್ಮ ಅಧಿಕಾರಿಗಳು ಅತಿ ಸೂಕ್ಷ್ಮವಾಗಿ ಎಲ್ಲವನ್ನೂ ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಹೇಳಿದ್ದಾರೆ..ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಪ್ರಕರಣ ಹೇಯ ಕೃತ್ಯ. ಆರೋಪಿ ತುಂಬಾ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಈ ಕೃತ್ಯ ಎಸಗಿದವರಿಗೆ ತಕ್ಕ ಶಿಕ್ಷೆಯಾಗುತ್ತೆ ಎಂದು ದಯಾನಂದ್ ಅವರು ಹೇಳಿದ್ದಾರೆ..
ಈ ಪ್ರಕರಣದ ಬಗ್ಗೆ ಹಲವಾರು ಆಯಾಮಗಳಲ್ಲಿ ನಾವು ತನಿಖೆ ಮಾಡುತ್ತಿದ್ದೇವೆ. ಆರಂಭದಲ್ಲಿ ತನಿಖಾ ತಂಡದಲ್ಲಿದ್ದ ಡಿಸಿಪಿ ಗಿರೀಶ್ ಅವರನ್ನು ಈ ಪ್ರಕರಣದ ತನಿಖೆಗೆ ವಾಪಸ್ ಸೇರಿಸಲಾಗಿದೆ. ಪ್ರಕರಣದ ಸಂಪೂರ್ಣ ಮೇಲುಸ್ತುವಾರಿಯನ್ನು ಡಿಸಿಪಿ ಗಿರೀಶ್ ಅವರೇ ವಹಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 17 ಮಂದಿಯನ್ನು ಬಂಧಿಸಲಾಗಿದೆ. ಕೂಲಂಕಷವಾಗಿ ತನಿಖೆ ನಡೆಯುತ್ತಿದೆ.. ಮೃತ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ದಯಾನಂದ್ ಅವರು ಹೇಳಿದ್ದಾರೆ.. ಶೀಘ್ರವೇ ಕೋರ್ಟ್‌ಗೆ ಪ್ರಮುಖ ಸಾಕ್ಷಿಗಳನ್ನು ಒದಗಿಸುತ್ತೇವೆ ಎಂದೂ ದಯಾನಂದ್ ಅವರು ಹೇಳಿದ್ದಾರೆ..