BengaluruCinemaCrime

ರೌಡಿ ಶೀಟರ್‌ ಕೊತ್ತ ರವಿ ಕೊಲೆ ಕೇಸ್‌; ಕನ್ನಡ ಚಿತ್ರನಿರ್ದೇಶಕ ಅರೆಸ್ಟ್‌!

ಬೆಂಗಳೂರು; ಕೊಲೆ ಪ್ರಕರಣವೊಂದರ ಸಂಬಂಧ ಸ್ಯಾಂಡಲ್‌ವುಡ್‌ ನಿರ್ದೇಶಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.. 20 ವರ್ಷಗಳ ಹಿಂದೆ ಕೊಲೆಯೊಂದು ನಡೆದಿದ್ದು, ಅಂದಿನಿಂದ ತಲೆಮರೆಸಿಕೊಂಡಿದ್ದ, ಕನ್ನಡದ ಚಿತ್ರ ನಿರ್ದೇಶಕ ಗಜೇಂದ್ರ ಅಲಿಯಾಸ್‌ ಗಜ ಕೊನೆಗೂ ಸಿಕ್ಕಿಬಿದ್ದಿದ್ದಾನೆ.. ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ..

ಇದನ್ನೂ ಓದಿ; 7ನೇ ವೇತನ ಆಯೋಗ ಶಿಫಾರಸು ಜಾರಿ; ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

ಗಜೇಂದ್ರ ಸ್ಯಾಂಡಲ್‌ವುಡ್‌ ಹಾಗೂ ಕಾಲಿವುಡ್‌ನಲ್ಲಿ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದ.. 2004ರಲ್ಲಿ ಬೆಂಗಳೂರು ನಗರದ ವಿಲ್ಸನ್‌ ಕಾರ್ಡನ್‌ನಲ್ಲಿ ರೌಡಿಶೀಟರ್‌ ಆಗಿದ್ದ ಕೊತ್ತ ರವಿ ಎಂಬಾತನ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಚಿತ್ರ ನಿರ್ದೇಶಕ ಗಜೇಂದ್ರ ಅಲಿಯಾಸ್‌ ಗಜ ಎಂಟನೇ ಆರೋಪಿಯಾಗಿದ್ದ.. ಇತರ ಆರೋಪಿಗಳ ಜೊತೆ ಬಂಧಿತನಾಗಿದ್ದ ಗಜೇಂದ್ರ ಒಂದು ವರ್ಷದ ಬಳಿಕ ಜಾಮೀನಿನ ಮೇಲೆ ರಿಲೀಸ್‌ ಆಗಿದ್ದ.. ಅನಂತರ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ..

ಇದನ್ನೂ ಓದಿ; 7ನೇ ತರಗತಿ ಬಾಲಕಿ ಗ್ಯಾಸ್‌ ಡೆಲಿವರಿ ಬಾಯ್‌ ಮನೆಯಲ್ಲಿ ಅನುಮಾನಾಸ್ಪದ ಸಾವು!

ಗಜೇಂದ್ರ ಕನ್ನಡದಲ್ಲಿ ಪುಟಾಣಿ ಪವರ್‌ ಹಾಗೂ ರುದ್ರ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾನೆ ಎಂದು ತಿಳಿದುಬಂದಿದೆ.. ಇದರ ಜೊತೆಗೆ ತಮಿಳಿನಲ್ಲೂ ಒಂದೆರಡು ಸಿನಿಮಾಗಳನ್ನು ಮಾಡಿದ್ದ ಎಂದು ತಿಳಿದುಬಂದಿದೆ..

Share Post