CrimeNational

ಅಮರನಾಥ ಯಾತ್ರಿಗಳ ಟಾರ್ಗೆಟ್‌; ಭಾರಿ ಸಂಚು ವಿಫಲಗೊಳಿಸಿದ ಭದ್ರತಾ ಪಡೆ

ಜಮ್ಮು ಕಾಶ್ಮೀರ;  ಅಮರನಾಥ್‌ ಯಾತ್ರಿಕರ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದು, ಭಾರಿ ಸಂಚನ್ನು ಭದ್ರತಾ ಸಿಬ್ಬಂದಿ ವಿಫಲಗೊಳಿಸಿದ್ದಾರೆ. ರಜೌರಿಯಾ ದ್ರಾಜ್‌ ಪ್ರದೇಶದಲ್ಲಿ ಭದ್ರತಾ ಪಡೆಗಳು, ಹಲವು ಸ್ಫೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂಲಕ ಉಗ್ರರ ಭಾರಿ ಸಂಚನ್ನು ವಿಫಲಗೊಳಿಸಿದ್ದಾರೆ.

ರಜೌರಿಯಾ ದ್ರಾಜ್‌ ಅರಣ್ಯ ಪ್ರದೇಶದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮುದ್ದುಗುಂಡು ಹಾಗೂ ಸ್ಫೋಟಕಗಳನ್ನು ತಯಾರು ಮಾಡಲು ಸಂಗ್ರಹಿಸಿದ್ದ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 5 ಐಇಡಿ ಸ್ಫೋಟಕಗಳು, 19 ವಿದ್ಯುತ್ ಉಪಕರಣಗಳು, 05 ರಿಮೋಟ್ ಕಂಟ್ರೋಲ್, 10 ಫ್ಯೂಸ್, 1 ಸುತ್ತು, 1 ಬಟ್ಟೆಯನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಇನ್ನು ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ರಾಜೌರಿಯಲ್ಲಿ ನಡೆದ ಅವಳಿ ಐಇಡಿ ಸ್ಫೋಟ ಪ್ರಕರಣಗಳನ್ನು ಭೇದಿಸಿದ್ದಾರೆ. ಮಾರ್ಚ್ 26 ಮತ್ತು ಏಪ್ರಿಲ್ 19 ರಂದು ಅವಳಿ ಸ್ಫೋಟಗಳು ಸಂಭವಿಸಿದ್ದವು.  ಈ ಸ್ಫೋಟಗಳಲ್ಲಿ ನಾಲ್ವರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳಾದ ಮಹಮ್ಮದ್ ಶಬೀರ್ ಮತ್ತು ಮಹಮ್ಮದ್ ಸಾದಿಕ್ ಎಂಬುವವರನ್ನು ಬಂಧಿಸಲಾಗಿದೆ.

 

Share Post