NationalPolitics

ದೇಶದ ಹೆಸರು ಇಂಡಿಯಾ ಬದಲು ಭಾರತ್ ಎಂದು ನಾಮಕರಣ ಮಾಡಲಾಗುತ್ತಾ..?

ದೆಹಲಿ; ಕೇಂದ್ರ ಸರ್ಕಾರ ಇದೇ 18 ರಿಂದ 22ರವೆರೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆದಿದೆ. ಇದರಲ್ಲಿ ನಮ್ಮ ದೇಶವನ್ನು ಇಂಡಿಯಾ ಬದಲಾಗಿ ಭಾರತ್‌ ಎಂದು ಮರುನಾಮಕರಣ ಮಾಡುವ ಪ್ರಸ್ತಾಪ ಮಂಡನೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ರಾಷ್ಟ್ರಪತಿಗಳ ಕಚೇರಿಯಿಂದ ಹೊರಡಿಸಿರುವ ಭೋಜನಕೂಟದ ಆಹ್ವಾನ ಪತ್ರಿಕೆಯಲ್ಲಿ ‘President of India’ ಬದಲಿಗೆ ”President of Bharat’ ‘ ಎಂದು ಪ್ರಕಟವಾಗಿದೆ.

G20 ಶೃಂಗಸಭೆ 2023 ರ ಭೋಜನಕೂಟ ಆಹ್ವಾನ ಪತ್ರಿಕೆಯನ್ನು ಪ್ರಕಟಿಸಲಾಗಿದೆ. ಸಾಮಾನ್ಯವಾಗಿ ರಾಷ್ಟ್ರಪತಿಗಳ ಆಹ್ವಾನ ಪತ್ರಿಕೆಯಲ್ಲಿ  `President of India’ ಎಂದು ಮುದ್ರಿಸಲಾಗಿರುತ್ತದೆ. ಆದ್ರೆ ಈ ಆಹ್ವಾನ ಪತ್ರಿಕೆಯಲ್ಲಿ ಇದೇ ಮೊದಲ ಬಾರಿಗೆ ”President of Bharat’ ‘  ಎಂದು ಮುದ್ರಿಸಲಾಗಿದೆ. ಹೀಗಾಗಿ, ವಿಶೇಷ ಅಧಿವೇಶನದ ಕಡೆ ಕುತೂಹಲ ಹೆಚ್ಚು ಮಾಡಿದೆ.

ಈ ಬಗ್ಗೆ ಕಾಂಗ್ರೆಸ್‌ ನಾಯಕರು ಟ್ವೀಟ್‌ ಮಾಡಿದ್ದು, ದೇಶದ ಹೆಸರು ಬದಲಿಸಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಆಕ್ರೋಶಗಳನ್ನು ಹೊರಹಾಕಿದ್ದಾರೆ.

 

Share Post