BengaluruCrime

6 ಗಂಡಂದಿರಿಂದ ಜೀವನಾಂಶ; 7ನೇ ಗಂಡನಿಂದ ಜೀವನಾಂಶಕ್ಕಾಗಿ ಅರ್ಜಿ?

ಬೆಂಗಳೂರು; 6 ಗಂಡಂದಿರಿಗೆ ವಿಚ್ಛೇದನ ನೀಡಿ ಅವರಿಂದ ಜೀವನಾಂಶ ಪಡೆಯುತ್ತಿರುವ ಮಹಿಳೆಯೊಬ್ಬರು, ಈಗ ಏಳನೇ ಗಂಡನಿಗೂ ವಿಚ್ಛೇದನ ನೀಡಿ ಆತನಿಂದಲೂ ಜೀವನಾಂಶ ಕೋರಿದ್ದಾಳೆ.. ಈ ವಿಚಾರ ತಿಳಿದು ನ್ಯಾಯಾಧೀಶರೇ ಬೆಚ್ಚಿಬಿದ್ದಿದ್ದಾರೆ.. ಸೋಷಿಯಲ್‌ ಮೀಡಿಯಾದಲ್ಲಿ ಇಂತಹದ್ದೊಂದು ವಿಡಿಯೋ ವೈರಲ್‌ ಆಗುತ್ತಿದ್ದು, ಕರ್ನಾಟಕದಲ್ಲೇ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.. ಮಹಿಳೆಯೊಬ್ಬರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು, ಗಂಡನಿಂದ ಜೀವನಾಂಶ ಕೇಳಿದ್ದಾಳೆ.. ಆದ್ರೆ ಈಗಾಗಲೇ ಆಕೆ 6 ಗಂಡಂದಿರಿಗೆ ವಿಚ್ಛೇದನ ನೀಡಿ ಅವರಿಂದ ಜೀವನಾಂಶ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಇದನ್ನು ಕೇಳಿ ನ್ಯಾಯಾಧೀಶರೇ ಆಶ್ಚರ್ಯಚಕಿತರಾಗಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಮಗನ ಎದುರಲ್ಲೇ ರೌಡಿಗ್ಯಾಂಗ್‌ನಿಂದ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ!

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವಕೀಲರು ಹಾಗೂ ಜಡ್ಜ್‌ ಕನ್ನಡದಲ್ಲೇ ಮಾತನಾಡಿದ್ದಾರೆ.. ಮಹಿಳೆ ವಿವಾಹವಾಗಿ ಗಂಡನೊಂದರಿಗೆ ಆರು ತಿಂಗಳಿಂದ ಒಂದು ವರ್ಷ ಜೀವನ ಮಾಡುತ್ತಿದ್ದಳು.. ನಂತರ ಕ್ಯಾತೆ ತೆಗೆದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಳು ಎಂದು ಹೇಳಲಾಗಿದೆ.. ಮಹಿಳೆ ಈಗಾಗಲೇ ಆರು ಗಂಡಂದಿರಿಂದ ಜೀವನಾಂಶ ಪಡೆದಿರುವ ಮಾಹಿತಿ ಪಡೆದ ನ್ಯಾಯಾಧೀಶರು, ಮುಂದಿನ ವಿಚಾರಣೆಗೆ ಎಲ್ಲಾ ವಿಚ್ಛೇದಿತ ಗಂಡಂದಿರೂ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.. ಈ ವಿಡಿಯೋ ಅಧಿಕೃತವೋ, ನಕಲಿಯೋ ಗೊತ್ತಿಲ್ಲ.. ಆದ್ರೆ ಇಂತಹದ್ದೊಂದು ವಿಡಿಯೋ ಈಗ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ಮಾರುಕಟ್ಟೆಗೆ ಸಿಮೆಂಟ್‌ ಬೆಳ್ಳುಳ್ಳಿ ಬಂದಿದೆ ಹುಷಾರ್‌!

ಕೆಲವರು ಯೂಟ್ಯೂಬರ್‌ಗಳು ಕಾನೂನು ಮೀರಿ ಏನೇನೋ ವಿಡಿಯೋಗಳನ್ನು ಮಾಡುತ್ತಿರುತ್ತಾರೆ.. ಇದೂ ಕೂಡಾ ಅಂತಹದ್ದೇ ವಿಡಿಯೋ ಆಗಿರಬಹುದೇ ಎಂಬ ಅನುಮಾನವಿದೆ.. ಈ ಹಿನ್ನೆಲೆಯಲ್ಲಿ ಈ ಸುದ್ದಿಯನ್ನು ಸತ್ಯಾಸತ್ಯತೆ ತಿಳಿಯುವವರೆಗೂ ಗಂಭೀರವಾಗಿ ತೆಗೆದುಕೊಳ್ಳವ ಅವಶ್ಯಕತೆ ಇಲ್ಲ.

ಇದನ್ನೂ ಓದಿ; ನಡು ರಸ್ತೆಯಲ್ಲೇ ಚಾಕುವಿನಿಂದ ಚುಚ್ಚಿ ಯುವಕನ ಕೊಲೆ ಯತ್ನ!

Share Post