ಮಗನ ಎದುರಲ್ಲೇ ರೌಡಿಗ್ಯಾಂಗ್‌ನಿಂದ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ!
ಬೆಂಗಳೂರು; ರೌಡಿಶೀಟರ್ ಗ್ಯಾಂಗ್ ಒಂದು ಮಗನ ಎದುರಲ್ಲೇ ತಾಯಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.. 40 ವರ್ಷದ ಮಹಿಳೆಗೆ ಚಿತ್ರಹಿಂಸೆ ನೀಡಿದ್ದಲ್ಲದೆ ಆಕೆಯಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ.. ಇದನ್ನು ನೋಡುತ್ತಾ 20 ವರ್ಷದ ಮಗ ನಿಸ್ಸಹಾಯಕನಾಗಿ ನಿಂತಿದ್ದನಂತೆ. ಈ ಕೃತ್ಯಕ್ಕೆ ಇಬ್ಬರು ಮಹಿಳೆಯರು ಕೂಡಾ ಸಾಥ್ ನೀಡಿದ್ದರು ಎಂದು ಅರೋಪಿಸಲಾಗಿದೆ..
ಇದನ್ನೂ ಓದಿ; ಮಾರುಕಟ್ಟೆಗೆ ಸಿಮೆಂಟ್ ಬೆಳ್ಳುಳ್ಳಿ ಬಂದಿದೆ ಹುಷಾರ್!
ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.. ಸಂತ್ರಸ್ತೆ ಹಾಗೂ ಆಕೆಯ ಮಗಳ ಇಲ್ಲಿ ವಾಸವಿದ್ದು, ಇದೇ ಏರಿಯಾದ ರೌಡಿಶೀಟರ್ ಗಳಾದ ಜೋಸೇಫ್ ಹಾಗೂ ಶ್ರೀನಿವಾಸ್ @ ಪಾಗಲ್ ಸೀನಾನಿಗೆ ಸಂತ್ರಸ್ತೆ ಹಾಗೂ ಆಕೆಯ ಮಗನ ಪರಿಚಯವಿತ್ತು. ಇವರೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.. ಸದ್ಯ ತೀವ್ರ ಅಸ್ವಸ್ಥಗೊಂಡಿರುವ ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ..
ಇದನ್ನೂ ಓದಿ; ನಡು ರಸ್ತೆಯಲ್ಲೇ ಚಾಕುವಿನಿಂದ ಚುಚ್ಚಿ ಯುವಕನ ಕೊಲೆ ಯತ್ನ!
ಪ್ರಕರಣ ಸಂಬಂಧ ಜೋಸೆಫ್, ಶ್ರೀನಿವಾಸ್ @ ಪಾಗಲ್ ಸೀನಾ ಹಾಗೂ ಜತಿನ್, ವಿಘ್ನೇಶ್, ಸೈಯದ್ ಶಹಬುದ್ದಿನ್, ಸ್ವಾತಿ, ಸೌಮ್ಯಾ ಪ್ರತಾಪ್, ಮಾದೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.. ಮೊಬೈಲ್ ಹಾಗೂ ಚಿನ್ನದ ಸರ ಕಳವು ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಹಾಗೂ ಆಕೆಯ ಮಗ ಭಾಗಿಯಾಗಿದ್ದಾನೆಂದು ಆರೋಪಿಗಳಿಗೆ ಗೊತ್ತಾಗಿದೆ.. ಹೀಗಾಗಿ, ಅವರನ್ನು ಬೆದರಿಸಿ ಅವರು ಕದ್ದಿರುವ ಚಿನ್ನ ಕಿತ್ತುಕೊಳ್ಳಲು ರೌಡಿ ಗ್ಯಾಂಗ್ ಪ್ಲ್ಯಾನ್ ಮಾಡಿದೆ.. ಮಹಿಳೆ ಹಾಗೂ ಆಕೆಯ ಮಗ, ಆತನ ಇಬ್ಬರು ಸ್ನೇಹಿತರನ್ನು ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಲಾಗಿದೆ.. ಆದರೂ ಅವರು ಚಿನ್ನ ಕೊಟ್ಟಿಲ್ಲ. ಇದರಿಂದಾಗಿ ಆಕ್ರೋಶಗೊಂಡು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಹೇಳಲಾಗುತ್ತಿದೆ..
ಇದನ್ನೂ ಓದಿ; ಆ.23ಕ್ಕೆ ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ!; ಏನಿದು ಹೊಸ ಟ್ವಿಸ್ಟ್..?
ಇನ್ನೊಂದೆಡೆ ನಾಲ್ವರು ನಾಪತ್ತೆಯಾಗಿದ್ದರ ಬಗ್ಗೆ ಕಂಪ್ಲೇಂಟ್ ದಾಖಲಾಗಿತ್ತು.. ಈ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿಗಳು ಸಿಕ್ಕಿದ್ದಾರೆ.. ಅವರನ್ನು ವಿಚಾರಣೆ ನಡೆಸಿದಾಗ ಅವರು ನಡೆಸಿರುವ ಕೃತ್ಯದ ಬಗ್ಗೆ ಮಾಹಿತಿ ಸಿಕ್ಕಿದೆ.. ಚಂದ್ರಾಲೇಔಟ್ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.