CrimeDistricts

ಒಂದರಿಂದೊಂದು 17 ಬೈಕ್‌ಗಳಿಗೆ ಡಿಕ್ಕಿ ಹೊಡೆದ ಕಾರು!

ಹಾಸನ; ಹಾಸನ ಜಿಲ್ಲೆಯಲ್ಲಿ ಭೀಕರ ಅಪಘಾತವೊಂದು ನಡೆದಿದೆ.. ಒಂದೇ ಕಾರು ಬರೋಬ್ಬರಿ 17 ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ.. ಚಾಲಕನ ನಿಯಂತ್ರಣ ತಪ್ಪಿದ ಕಾರು ನಿಲ್ಲಿಸಿದ್ದ ಬೈಕ್‌ಗಳಿಗೆಲ್ಲಾ ಡಿಕ್ಕಿ ಹೊಡ್ಕೊಂಡೋಗಿದೆ.. ಅರಸೀಕೆರೆ ತಾಲ್ಲೂಕಿನ ಬಾಣಾವರ ಬಳಿಯ ಕೆಂಕೆರೆಹಳ್ಳಿ ಗೇಟ್‌ ಬಳಿ ಈ ಘಟನೆ ನಡೆದಿದೆ..

ಇದನ್ನೂ ಓದಿ; 6 ಗಂಡಂದಿರಿಂದ ಜೀವನಾಂಶ; 7ನೇ ಗಂಡನಿಂದ ಜೀವನಾಂಶಕ್ಕಾಗಿ ಅರ್ಜಿ?

ವಿಪರೀತ ಮಳೆ ಬರುತ್ತಿದ್ದರಿಂದ ಕೆಂಕೆರೆಹಳ್ಳಿ ಬಸ್‌ ನಿಲ್ದಾಣದ ಬಳಿ ಬೈಕ್‌ಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು.. ಇದೇ ವೇಳೆ ಅತಿವೇಗವಾಗಿ ಬಂದ ಫಾರ್ಚ್ಯೂನರ್‌ ಕಾರು ಚಾಲಕನ ನಿಯಂತ್ರಣ ತಪ್ಪಿ ಆ ನಿಲ್ಲಿಸಿದ್ದ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ.. ವಿಪರೀತ ಮಳೆಯಿಂದಾಗಿ ಚಾಲಕನಿಗೆ ರಸ್ತೆ ಕಾಣದಂತಾಗಿದ್ದೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.. KA-01 MK 6378 ನಂಬರ್‌ನ ಫಾರ್ಚೂನರ್ ಕಾರು ಇದಾಗಿದ್ದು, ಮೊದಲು ಬಸ್‌ ಶೆಲ್ಟರ್‌ನ ಗೋಡೆಗೆ ಡಿಕ್ಕಿ ಹೊಡೆದು ಅನಂತರ ಬೈಕ್‌ಗಳಿಗೆ ಗುದ್ದಿದೆ. ಘಟನೆಯಲ್ಲಿ ಒಬ್ಬನಿಗೆ ಗಾಯಗಳಾಗಿವೆ.. ಬೈಕ್‌ಗಳು ಜಖಂಗೊಂಡಿವೆ..
ಈ ಬಗ್ಗೆ ಬಾಣಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ..

ಇದನ್ನೂ ಓದಿ; ಮಗನ ಎದುರಲ್ಲೇ ರೌಡಿಗ್ಯಾಂಗ್‌ನಿಂದ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ!

Share Post