CrimeHealthNational

ಮಾರುಕಟ್ಟೆಗೆ ಸಿಮೆಂಟ್‌ ಬೆಳ್ಳುಳ್ಳಿ ಬಂದಿದೆ ಹುಷಾರ್‌!

ಮುಂಬೈ; ಮಾರುಕಟ್ಟೆ ಪ್ಲಾಸ್ಟಿಕ್‌ ಅಕ್ಕಿ ಬಂದಿದೆ, ಪ್ಲಾಸ್ಟಿಕ್‌ ಮೊಟ್ಟೆಗಳು ಬಂದಿವೆ ಎಂಬ ಸುದ್ದಿಗಳನ್ನು ಆಗಾಗ ಓದುತ್ತಿದ್ದೆವು.. ಈಗ ಬೆಳ್ಳುಳ್ಳಿ ಕೂಡಾ ನಕಲಿ ಬಂದಿದೆ. ಬೆಳ್ಳುಳ್ಳಿ ಕೆಜಿಗೆ 200 ರೂಪಾಯಿ ಆಗಿದೆ.. ಹೀಗಾಗಿ ಜನರಿಗೆ ಮೋಸ ಮಾಡಲು ಕೆಲವರು ಬೆಳ್ಳುಳ್ಳಿಯನ್ನು ಸಿಮೆಂಟ್‌ನಿಂದ ತಯಾರಿಸಿ, ನಿಜವಾದ ಬೆಳ್ಳುಳ್ಳಿ ಜೊತೆ ಮಿಕ್ಸ್‌ ಮಾಡಿ ಮಾರಾಟ ಮಾಡುತ್ತಿದ್ದಾರೆ.. ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಬಜೋರಿಯಾ ನಗರದಲ್ಲಿ ಈ ಸಿಮೆಂಟ್‌ ಬೆಳ್ಳುಳ್ಳಿ ಪತ್ತೆಯಾಗಿದ್ದು, ಅದರ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ನಡು ರಸ್ತೆಯಲ್ಲೇ ಚಾಕುವಿನಿಂದ ಚುಚ್ಚಿ ಯುವಕನ ಕೊಲೆ ಯತ್ನ!

ನಿವೃತ್ತ ಪೊಲೀಸ್‌ ಅಧಿಕಾರಿ ಸುಭಾಷ್‌ ಪಾಟೀಲ್‌ ಅವರ ಪತ್ನಿ ಮಾರುಕಟ್ಟೆಯಿಂದ ಬೆಳ್ಳುಳ್ಳಿಯನ್ನು ಖರೀದಿ ಮಾಡಿ ತಂದಿದ್ದರು. ಬೀದಿ ಬದಿ ವ್ಯಾಪಾರಿಯಿಂದ ಇದನ್ನು ಖರೀದಿಸಲಾಗಿತ್ತು. ಮನೆಗೆ ತಂದು ನೋಡಿದಾಗ ಅದರಲ್ಲಿ ಕೆಲವು ಬೆಳ್ಳುಳ್ಳಿಗಳು ಸಿಮೆಂಟ್‌ನಿಂದ ಮಾಡಿದವಾಗಿದ್ದವು. ಹೀಗಾಗಿ ಅದರ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಅಡುಗೆ ಮಾಡಲು ಒಂದು ಬೆಳ್ಳುಳ್ಳಿ ತೆಗೆದುಕೊಂಡಿರುವ ಮಹಿಳೆ ಅದನ್ನು ಬಿಡಿಸಲು ಹೋಗಿದ್ದಾರೆ.. ಆದ್ರೆ ಅದು ಬಿಡಿಸಲು ಹೋಗಿಲ್ಲ. ಗಟ್ಟಿಯಾಗಿರುವಂತೆ ಕಂಡಿದೆ.. ಪರೀಕ್ಷಿಸಿ ನೋಡಿದರೆ ಅದು ಸಿಮೆಂಟ್‌ನಿಂದ ತಯಾರಿಸಿದ್ದು ಅನ್ನೋದು ಖಾತ್ರಿಯಾಗಿದೆ..

ಇದನ್ನೂ ಓದಿ; ಆ.23ಕ್ಕೆ ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ!; ಏನಿದು ಹೊಸ ಟ್ವಿಸ್ಟ್‌..?

Share Post