BengaluruCrime

ಮಾಡೆಲ್‌ ವಿದ್ಯಾಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌; ಇದಕ್ಕೆಅವನೇ ಕಾರಣ..!

ಬೆಂಗಳೂರು; ಜುಲೈ 21ರಂದು ನಡೆದಿದ್ದ ಮಾಡೆಲ್‌ ವಿದ್ಯಾಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ವಿದ್ಯಾಶ್ರೀ ಫೇಸ್‌ಬುಕ್‌ನಲ್ಲಿ ಪರಚಿಯವಾಗಿದ್ದ ಜಿಮ್‌ ಕೋಚ್‌ ಅಕ್ಷಯ್‌ ಎಂಬಾತನನ್ನು ಪ್ರೀತಿಸುತ್ತಿದ್ದು, ಆತನ ಕಿರುಕುಳದಿಂದಲೇ ಸಾವನ್ನಪ್ಪಿರೋದಾಗಿ ತಿಳಿದುಬಂದಿದೆ. ಈ ಸಂಬಂಧ ಪೊಲೀಸರಿಗೆ ಡೆತ್‌ನೋಟ್‌ ಒಂದು ಸಿಕ್ಕಿದೆ. ಇದರ ಆಧಾರದ ಮೇಲೆ ಸೋಲದೇವನಹಳ್ಳಿ ಪೊಲೀಸರು ಜಿಮ್‌ ಕೋಚ್‌ ಅಕ್ಷಯ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಎಂಸಿಎ ಮುಗಿಸಿದ್ದ ವಿದ್ಯಾರ್ಥಿ ಮಾಡೆಲ್‌ ಆಗಿರುವುದಲ್ಲದೆ ಸಾಫ್ಟ್‌ವೇರ್‌ ಉದ್ಯೋಗಿಯೂ ಆಗಿದ್ದರು. ಅವರಿಗೆ ಫೇಸ್‌ಬುಕ್‌ನಲ್ಲಿ ಜಿಮ್‌ ಟ್ರೇನರ್‌ ಅಕ್ಷಯ್‌ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ನಂತರ ಅಭಿಮಾನಿ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದ. ಈ ಪರಿಚಯ ಕೆಲವೇ ದಿನಗಳಲ್ಲಿ ಪ್ರೀತಿಗೆ ತಿರುಗಿತ್ತು. ಅನಂತರ ದೈಹಿಕವಾಗಿಯೂ ವಿದ್ಯಾಶ್ರೀಯನ್ನು ಬಳಸಿಕೊಂಡಿದ್ದ ಆರೋಪಿ, ನಂತರ ವಿದ್ಯಾಶ್ರೀಗೆ ಕಿರುಕುಳ ನೀಡಲು ಶುರು ಮಾಡಿದ್ದನಂತೆ. ಅಕ್ಷಯ್‌ ನನ್ನನ್ನು ನಾಯಿ ರೀತಿಯಲ್ಲಿ ನೋಡುತ್ತಿದ್ದ ಎಂದು ಡೆತ್‌ನೋಟ್‌ನಲ್ಲಿ ವಿದ್ಯಾಶ್ರೀ ಅಳಲು ತೋಡಿಕೊಂಡಿದ್ದಾರೆ.

ವಿದ್ಯಾಶ್ರೀ ಬರೆದಿರುವ ಡೆತ್‌ನೋಟ್‌ನಲ್ಲಿ ಏನಿದೆ..?

ನನ್ನ ಸಾವಿಗೆ ಅಕ್ಷಯ್​ ಕಾರಣ. ಅವನು ನನ್ನನ್ನು ನಾಯಿತರಾ ನೋಡುತ್ತಿದ್ದಾನೆ. ಜೊತೆಗೆ ಅವನು ನನಗೆ ಕೊಡಬೇಕಾದ 1 ಲಕ್ಷದ 76 ಸಾವಿರ ದುಡ್ಡು ವಾಪಸ್‌ ಕೊಡುತ್ತಿಲ್ಲ. ಹಣ ಕೇಳಿದರೆ, ನನ್ನ ಪ್ಯಾಮಿಲಿಗೆ ಕೆಟ್ಟ ಮಾತುಗಳಲ್ಲಿ ಬೈದು ಫೋನ್‌ ಕಟ್‌ ಮಾಡುತ್ತಾನೆ. ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾನೆ. ಇದರಿಂದ ನನಗೆ ಡಿಪ್ರೆಷನ್‌ ಉಂಟಾಗಿದೆ.  ಇದರಿಂದಾಗಿ ನನಗೆ ಬದುಕೋದಕ್ಕೆ ಆಗ್ತಾ ಇಲ್ಲ.  ಡೇ ಬೈ ಡೇ ನನಗೆ ತುಂಬಾ ಸ್ಟ್ರೆಸ್‌ ಆಗ್ತಾ ಇದೆ.  ಅಮ್ಮ, ಗುರು, ಮನು I am Sorry. ದಯವಿಟ್ಟು ನನ್ನನ್ನು ನೀವೆಲ್ಲಾ ಕ್ಷಮಿಸಿ.  ಎಲ್ಲಾ ಹುಡುಗಿಯರಲ್ಲಿ ನನ್ನದೊಂದು ವಿನಂತಿ. ದಯಬಿಟ್ಟು ಯಾರೂ ಲವ್​ ಮಾಡಬೇಡಿ. goodbye this World.

 

Share Post