ಅಂಗಡಿ ಮುಂದೆ ನಿಂತಿದ್ದ ಕಾರ್ಮಿಕನ ಕತ್ತು ಕುಯ್ದ ಅಪರಿಚಿತ!
ತುಮಕೂರು(Tumkur); ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ.. ಯಾವಾಗ ಏನು ನಡೆಯುತ್ತೋ, ಯಾರು ಬಂದು ಏನು ಮಾಡುತ್ತಾರೋ ಗೊತ್ತಾಗೋದಿಲ್ಲ.. ಇದಕ್ಕೆ ಸಾಕ್ಷಿಯೇ ತುಮಕೂರಿನಲ್ಲಿ ನಡೆದಿರುವ ಘಟನೆ.. ತುಮಕೂರು ನಗರದ ಸದಾಶಿವನಗರದಲ್ಲಿ ಕಾರ್ಮಿಕನೊಬ್ಬ ಅಂಗಡಿ ಮುಂದೆ ನಿಂತಿದ್ದ.. ಈ ವೇಳೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕುಡಿಯೋದಕ್ಕೆ ಹಣ ಕೇಳಿದ್ದಾನೆ.. ಇಲ್ಲ ಎಂದಿದ್ದಕ್ಕೆ ಬ್ಲೇಡ್‌ನಿಂದ ಕುತ್ತಿಗೆ ಕುಯ್ದಿದ್ದಾನೆ..
ಇದನ್ನೂ ಓದಿ; ಲಿಫ್ಟ್‌ನಲ್ಲೇ ಯುವಕ-ಯುವತಿ ಕಿಸ್ಸಿಂಗ್!; ವಿಡಿಯೋ ಲೀಕ್ ಆಗಿದ್ದು ಹೇಗೆ..?
ಇಂದು ಬೆಳಗ್ಗೆ ತುಮಕೂರಿನಲ್ಲಿ ಈ ಘಟನೆ ನಡೆದಿದೆ.. ಚಿತ್ರದುರ್ಗ ಮೂಲದ ಹನುಮಂತು ಎಂಬಾತ ತುಮಕೂರಿನಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾನೆ.. ಕುಟುಂಬದವರೂ ತುಮಕೂರಿನಲ್ಲೇ ಇದ್ದಾರೆ.. ಇಂದು ಬೆಳಗ್ಗೆ ಹೆಂಡತಿ-ಮಕ್ಕಳೊಂದಿಗೆ ಹನುಮಂತು ದಿನಸಿ ತರಲೆಂದು ಅಂಗಡಿಗೆ ಬಂದಿದ್ದ.. ಅಲ್ಲಿಗೆ ಬಂದ ಕಿರಾತಕನೊಬ್ಬ ಹಣ ಕೊಡುವಂತೆ ಕೇಳಿದ್ದಾನೆ.. ಆದ್ರೆ ಬಡ ಹನುಮಂತು ಇಲ್ಲ ಎಂದಿದ್ದಾನೆ.. ಕೂಡಲೇ ಬ್ಲೇಡ್ ತೆಗೆದ ಆರೋಪಿ, ಕುತ್ತಿಗೆಗೆ ಇರಿದಿದ್ದಾರೆ.. ಇದ್ರಿಂದ ಹನಮಂತುಗೆ ತೀವ್ರ ರಕ್ತಸ್ರಾವವಾಗಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ..
ದಾಳಿ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ತಿಲಕ್‌ನಗರ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ..
ಇದನ್ನೂ ಓದಿ; ಪತ್ನಿ ಮೈಮೇಲೆಲ್ಲಾ ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ವಿಕೃತಿ ಮೆರೆದ ಗಂಡ!