ನಲಪಾಡ್ ಹೆಸರೇಳಿ ನಡೆಯಿತಾ ವಿದ್ಯಾರ್ಥಿ ಕಿಡ್ನ್ಯಾಪ್..?; ಏನಿದು ಪ್ರಕರಣ..?
ಬೆಂಗಳೂರು; ಕೆಲ ಹುಡುಗರು ವಿದಾರ್ಥಿಯೊಬ್ಬನನ್ನು ಕಿಡ್ನ್ಯಾಪ್ ಮಾಡಿದ್ದು, ಆತನ ಮೇಲೆ ಹಲ್ಲೆ ನಡೆಸಲಾಗಿದೆ.. ಈ ಬಗ್ಗೆ ಹಲ್ಲೆಗೊಳಗಾದ ವಿದ್ಯಾರ್ಥಿ ದೂರು ನೀಡಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.. ಕಿಡ್ನ್ಯಾಪ್ ವೇಳೆ ನಾವು ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಕಡೆಯ ಹುಡುಗರು ಎಂದು ಹೇಳಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.. ಆದ್ರೆ ಆ ಹುಡುಗರಿಗೂ ನಲಪಾಡ್‌ಗೂ ಸಂಬಂಧವಿದೆಯೋ, ಇಲ್ಲವೋ ಗೊತ್ತಿಲ್ಲ. ತನಿಖೆಯಿಂದಷ್ಟೇ ಮಾಹಿತಿ ಸಿಗಬೇಕಿದೆ..
ಇದನ್ನೂ ಓದಿ; ಸಿದ್ದರಾಮಯ್ಯಗೆ ವರದಾನವಾಗುತ್ತಾ ʻಚೆಕ್‌ಲಿಸ್ಟ್ʼ?
ಖಾಸಗಿ ಕಾಲೇಜಿನಲ್ಲಿ ಬಿಬಿಎ ಜೀವನ್ ಜೈನ್ ಎಂಬ ವಿದ್ಯಾರ್ಥಿ ಇವೆಂಟ್ ಒಂದರ ಕಾರಣಕ್ಕಾಗಿ ವರ್ಷದ ಹಿಂದೆ ಆಯುಷ್ ಶ್ರೀನಿವಾಸ್ ಎಂಬಾತನ ಬಳಿ 3 ಲಕ್ಷ ರೂಪಾಯಿ ಸಾಲ ಪಡೆದಿದ್ದನಂತೆ.. ಆದ್ರೆ ಇನ್ನೂ ಅದನ್ನು ಹಿಂತಿರುಗಿಸಲಾಗಿರಲಿಲ್ಲ.. ಇತ್ತೀಚೆಗಷ್ಟೇ ಹಣ ನೀಡಿದ್ದಾನೆ ಎನ್ನಲಾಗಿದೆ.. ಲೇಟಾಗಿ ಹಣ ಕೊಟ್ಟಿದ್ದಕ್ಕಾಗಿ ಕಿಡ್ನ್ಯಾಪ್ ಮಾಡಿ ಸುಲಿಗೆ ಮಾಡಲಾಗಿದೆ ಎಂದು ತಿಳಿದುಬಂದಿದೆ.. ಹತ್ತು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದು, 6 ಲಕ್ಷ ರೂಪಾಯಿಯನ್ನು ಕಿತ್ತುಕೊಂಡಿದ್ದಾರಂತೆ. ಇನ್ನೂ ನಾಲ್ಕು ಲಕ್ಷ ರೂಪಾಯಿ ಕೊಡಬೇಕು ಎಂದು ಬೆದರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ..
ಇದನ್ನೂ ಓದಿ; ಆ.23ಕ್ಕೆ ದೆಹಲಿಗೆ ತೆರಳಲಿರುವ ಸಿದ್ದರಾಮಯ್ಯ!; ಏನಿದು ಹೊಸ ಟ್ವಿಸ್ಟ್..?
ಈ ಬಗ್ಗೆ ವಿದ್ಯಾರ್ಥಿ ಜೀವನ್ ಜೈನ್ ಪೊಲೀಸ್ ಕಮೀಷನರ್‌ಗೆ ಮೇಲ್ ಮಾಡಿ ಮಾಹಿತಿ ನೀಡಿದ್ದಾನೆ.. ಇದರ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.. ಆರೋಪಿಗಳು ಸಿಕ್ಕ ಮೇಲೆ ನಿಜವಾದ ಮಾಹಿತಿ ಸಿಗಲಿದೆ..