ಪ್ರಜ್ವಲ್ ವಿರುದ್ಧ ಬ್ಲ್ಯೂ ಕಾರ್ನರ್ ನೋಟಿಸ್; 196 ದೇಶಗಳಿಗೆ ಮಾಹಿತಿ ರವಾನೆ
ಬೆಂಗಳೂರು; ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ಬಿಡುಗಡೆಯಾದ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲ್ಯೂ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, 196 ದೇಶಗಳಿಗೆ ಈ ಬಗ್ಗೆ ಮಾಹಿತಿ ರವಾನೆ ಮಾಡಲಾಗಿದೆ..
ಪ್ರಜ್ವಲ್ ರೇವಣ್ಣ ಭಾನುವಾರವೇ ಬೆಂಗಳೂರಿಗೆ ಬರುತ್ತಾರೆ ಎಂದು ಹೇಳಲಾಗುತ್ತಿತ್ತು.. ಆದ್ರೆ ಅವ್ರು ಇದುವರೆಗೂ ಬಂದಿಲ್ಲ.. ಜರ್ಮನಿಗೆ ತೆರಳಿದ್ದ ಪ್ರಜ್ವಲ್ ಅಲ್ಲಿಂದ ದುಬೈಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.. ಪ್ರಕರಣಕ್ಕೆ ಸಂಬಂಧಿಸಿದಂತೆ 196 ರಾಷ್ಟ್ರಗಳಿಗೆ ಇಂಟರ್ ಪೋಲ್ ಮಾಹಿತಿ ರವಾನಿಸಲಾಗಿದೆ.
ಇದರಿಂದಾಗಿ ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಸಂಕಷ್ಟ ಶುರುವಾಗಿದೆ.. ಈ ಬಗ್ಗೆ ಎಸ್ಐಟಿಗೆ ಇಂಟರ್ಪೋಲ್ ಮಾಹಿತಿ ನೀಡಿದೆ.