LifestyleNational

ವರನಿಗೆ ಸೀರೆ, ವಧುವಿಗೆ ಶರ್ಟ್‌, ಪಂಚೆ ಉಡಿಸ್ತಾರೆ!; ಆಂಧ್ರದಲ್ಲಿ ವಿಚಿತ್ರ ಸಂಪ್ರದಾಯ

ಪ್ರಕಾಶಂ; ನಾಗರಿಕತೆ ಎಷ್ಟೇ ಬದಲಾದರೂ ವಂಶ, ಕುಲ ಸಂಪ್ರದಾಯಗಳನ್ನು ಜನರು ಇಂದಿಗೂ ಆಚರಿಸುತ್ತಲೇ ಇದ್ದಾರೆ. ಇದಕ್ಕೆ ಈ ಸ್ಟೋರಿಯೇ ಉತ್ತಮ ಉದಾಹಣೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆ ವಿಚಿತ್ರ ಮದುವೆಯೊಂದಕ್ಕೆ ಸಾಕ್ಷಿಯಾಗಿದೆ. ಯಾಕಂದ್ರೆ ಇಲ್ಲಿ ಮದುಮಗ ಮದುವೆ ಹೆಣ್ಣಿನಂತೆ ಸಿಂಗಾರಗೊಂಡಿದ್ದಾನೆ. ಅಷ್ಟೇ ಅಲ್ಲ, ಭಾಜಾಭಜಂತ್ರಿಗಳೊಂದಿಗೆ ಹುಡುಗಿಯಂತೆ ಸಿಂಗಾರಗೊಂಡ ಮದುಮಗನ ಮೆರವಣಿಗೆ ಕೂಡಾ ನಡೆಸಲಾಗಿದೆ. ಇದು ನಡೆದಿರೋದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆ ಕೋನಮಿಟ್ಲ ಮಂಡಲ್‌ ಗೊಟ್ಲಗಟ್ಟ ಗ್ರಾಮದಲ್ಲಿ. 

ಇದನ್ನೂ ಓದಿ; ನಟ ದರ್ಶನ್‌ಗೆ ಸದ್ಯಕ್ಕೆ ಜೈಲೂಟವೇ ಫಿಕ್ಸ್‌; ಜುಲೈ 18ಕ್ಕಾದರೂ ಸಿಗುತ್ತಾ ಮನೆಯೂಟ?

ಇದು ವಶಂಪಾರಂಪರ್ಯವಾಗಿ ಬರುತ್ತಿರುವ ಆಚಾರದ ಒಂದು ಭಾಗ. ಗೊಟ್ಲಘಟ್ಟ ಗ್ರಾಮದ ನಾಲಿ ರಾಮಯ್ಯ ಎಂಬುವರ ಮಗ ಯೋಗೇಂದ್ರ ಬಾಬುಗೆ ವಿವಾಹ ನಿಶ್ಚಯವಾಗಿದೆ. ಅವರ ವಂಶ ಸಂಪ್ರದಾಯದ ಪ್ರಕಾರ ವರ ವಧುವಿನಂತೆ ಸಿಂಗಾರಗೊಳ್ಳಬೇಕು. ವಧುವಾದರೆ ವರನಂತೆ ಸಿಂಗಾರವಾಗಬೇಕು. ಫ್ಯಾಂಟು, ಶರ್ಟ್‌ಗೆ ಬದಲಾಗಿ ಸೀರೆ, ಚಾಕೆಟ್‌, ವಿಗ್‌ ಧರಿಸಿಕೊಂಡು ಹುಡುಗಿಯಂತೆ ಸಿಂಗಾರಗೊಳ್ಳಬೇಕು. ಥೇಟ್‌ ಮದುಮಗಳಂತೆ ಸಿಂಗಾರಗೊಂಡ ನಂತರ ಅವರ ಕುಲದೇವರಾದ ಗುರಪ್ಪ ಸ್ವಾಮಿಗೆ ಹರಕೆ ತೀರಿಸಬೇಕು.

ಇದನ್ನೂ ಓದಿ; ಮೊಮ್ಮಗ ಆತ್ಮಹತ್ಯೆ ಮಾಡಿಕೊಂಡ; ಮೃತದೇಹ ನೋಡಿದ ಅಜ್ಜನಿಗೆ ಹೃದಯಾಘಾತ!

ಇವರ ಆಚಾರಗಳಲ್ಲಿ ಮದುಮಗನನ್ನು ಮದುಮಗಳ ರೀತಿಯೂ, ಮದುಮಗಳನ್ನು ಮದುಮಗಳ ರೀತಿಯೂ ಸಿಂಗರಿಸಲಾಗುತ್ತದೆ. ನಂತರ ಗುರಪ್ಪ ಸ್ವಾಮಿಗೆ ಕರಕೆ ತೀರಿಸಲಾಗುತ್ತದೆ. ಅನಾದಿ ಕಾಲದಿಂದ ಬರುತ್ತಿರುವ ಈ ಸಂಪ್ರದಾಯವನ್ನು ಇಂದಿಗೂ ಮುಂದವರೆಸಲಾಗುತ್ತಿದೆ.

Share Post