ಪೆನ್‌ಡ್ರೈವ್ ಬಿಡುಗಡೆಯನ್ನು ಕಾಂಗ್ರೆಸ್‌ನವ್ರೇ ತಡೆಯುತ್ತಿದ್ದಾರೆ; ಹೆಚ್ಡಿಕೆ ಬಾಂಬ್
ಬೆಂಗಳೂರು; ಪೆನ್‌ಡ್ರೈವ್ ಬಿಡುಗಡೆಯನ್ನು ಕಾಂಗ್ರೆಸ್‌ನವರೇ ತಡೆಯುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ತೋರಿಸಿರುವ ಪೆನ್‌ಡ್ರೈವ್ ಸಾಮಾನ್ಯ ಪೆನ್‌ಡ್ರೈವ್ ಅಲ್ಲ. ಅದನ್ನು ರಿಲೀಸ್ ಮಾಡೋದಕ್ಕೆ ನನಗೇನೂ ಆತುರವಿಲ್ಲ ಎಂದು ಹೇಳಿದ್ದಾರೆ.
ಈಗಲೇ ಆತುರ ಪಡೋದು ಬೇಡ. ತುಂಬಾ ವಿಚಾರಗಳು ಸಿಗುತ್ತವೆ. ಕಾಂಗ್ರೆಸ್‌ನಲ್ಲೇ ವಿಕೆಟ್ ಬೀಳಬೇಕು ಅಂತ ಕೆಲವರು ಕಾಯ್ತಾ ಇದ್ದಾರೆ. ನಾನು ಎಲ್ಲೂ ಕದ್ದು ಓಡೋದಿಲ್ಲ ಎಂದು ಹೆಚ್ಡಿಕೆ ಹೇಳಿದ್ದಾರೆ. ವರ್ಗಾವಣೆ ದಂಧೆಗೆ ಅಡ್ಡಗಳನ್ನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಹೆಚ್ಡಿಕೆ, ಕೃಷಿ ಇಲಾಖೆಯ ವರ್ಗಾವಣೆ ದರಪಟ್ಟಿಯನ್ನೂ ರಿಲೀಸ್ ಮಾಡಿದ್ದಾರೆ.
ಎಚ್‌ಡಿಕೆ ನೀಡಿದ ಕೃಷಿ ಇಲಾಖೆಯ ವರ್ಗಾವಣೆ ದರಪಟ್ಟಿ ಎಷ್ಟು?
============================================
ಕೇಂದ್ರ ಕಚೇರಿ ಜಂಟಿ ನಿರ್ದೇಶಕರು – 1 ಕೋಟಿಯಿಂದ 1.5 ಕೋಟಿ ರೂ.
ಜಿಲ್ಲೆಗಳ ಜಂಟಿ ನಿರ್ದೇಶಕರು – 15 ಲಕ್ಷದಿಂದ 75 ಲಕ್ಷ ರೂ.
ಉಪ ನಿರ್ದೇಶಕರು – 10 ಲಕ್ಷದಿಂದ 30 ಲಕ್ಷ ರೂ.
ಸಹಾಯಕ ನಿರ್ದೇಶಕರು – 5 ಲಕ್ಷದಿಂದ 15 ಲಕ್ಷ ರೂ.
ಜಿಲ್ಲಾ ಕಚೇರಿಯಲ್ಲಿನ ಸಹಾಯಕ ನಿರ್ದೇಶಕರು – 3 ಲಕ್ಷದಿಂದ 10 ಲಕ್ಷ ರೂ.
ರೈತ ಸಂಪರ್ಕ ಕೇಂದ್ರಗಳು – 1 ಲಕ್ಷ ದಿಂದ 2 ಲಕ್ಷ ರೂ.