Politics

ಮಲ್ಲಿಕಾರ್ಜುನ ಖರ್ಗೆ ತವರಲ್ಲಿ ಪ್ರಧಾನಿ ಮೋದಿ ಹವಾ; ಇಂದು ಬೃಹತ್‌ ಸಮಾವೇಶ

ಕಲಬುರಗಿ; ಪ್ರಧಾನಿ ನರೇಂದ್ರ ಮೋದಿ ಇಂದು ಕಲಬುರಗಿಗೆ ಆಗಮಿಸುತ್ತಿದ್ದಾರೆ.. ಕಲ್ಯಾಣ ಕರ್ನಾಟಕ ಭಾಗದಿಂದ ಅವರು ಲೋಕಸಭಾ ಚುನಾವಣಾ ಕ್ಯಾಂಪೇನ್‌ ಶುರು ಮಾಡುತ್ತಿದ್ದಾರೆ.. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರಿನಿಂದಲೇ ಪ್ರಧಾನಿ ನರೇಂದ್ರ ಮೋದಿಯವರು ರಣಕಹಳೆ ಊದುತ್ತಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದ್ದಾರೆ.

ಇದನ್ನೂ ಓದಿ; Mysore Loksabha; ಮೈಸೂರಲ್ಲಿ ಯತೀಂದ್ರ-ಯದುವೀರ ಯುದ್ಧ ಫಿಕ್ಸ್‌!

ಮಧ್ಯಾಹ್ನ 2.15ಕ್ಕೆ ಬೃಹತ್‌ ಸಮಾವೇಶ;

ಕಳೆದ ಲೋಕಸಭಾ ಚುನಾವಣೆಯಲ್ಲೂ ಕೂಡಾ ಮೋದಿಯವರು ಕಲಬುರಗಿಯಿಂದಲೇ ಪ್ರಚಾರ ಶುರು ಮಾಡಿದ್ದರು.. ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ 25 + 1 ಸ್ಥಾಗಳು ಬಂದಿದ್ದವು. ಹೀಗಾಗಿ, ಕಲಬುರಗಿ ಅದೃಷ್ಟದ ಸ್ಥಳ ಎಂದು ಮೋದಿ ನಂಬಿದಂತಿದೆ.. ಹೀಗಾಗಿ ಈ ಬಾರಿಯೂ ಅವರು ಕಲಬುರಗಿಯಿಂದಲೇ ಪ್ರಚಾರ ಶುರು ಮಾಡುತ್ತಿದ್ದಾರೆ.. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೋದಿಯವರು ತೆಲಂಗಾಣದಿಂದ ಕಲಬುರಗಿಯ ಮನೋ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಅನಂತರ ಅವರು ಮಧ್ಯಾಹ್ನ 2.15ಕ್ಕೆ ಎನ್‌ವಿ ಕಾಲೇಜು ಮೈದಾನದಲ್ಲಿ ಬೃಹತ್‌ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ; ಯಡಿಯೂರಪ್ಪ ಪುತ್ರನ ವಿರುದ್ಧ ಈಶ್ವರಪ್ಪ ಸ್ಪರ್ಧೆ; ಘೋಷಣೆ

2 ಲಕ್ಷ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿ;

ಈ ಸಮಾವೇಶಕ್ಕೆ ಸುಮಾರು ಐದು ಲೋಕಸಭಾ ಕ್ಷೇತ್ರದ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. 2  ಲಕ್ಷ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.. ಹೀಗಾಗಿ ಬೃಹತ್‌  ಪೆಂಡಾಲ್‌ ಹಗೂ ವೇದಿಕೆಯನ್ನು ನಿರ್ಮಿಸಲಾಗಿದೆ..ಬೀದರ್‌, ಕಲಬುರಗಿ ಸೇರಿ ಐದು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರು ಇಲ್ಲಿಗೆ ಬರಲಿದ್ದಾರೆ ಎಂದು ತಿಳಿದುಬಂದಿದೆ. ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಲವು ನಾಯಕರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.. ಮೋದಿ ಆಗಮನ ಹಿನ್ನೆಲೆಯಲ್ಲಿ ಅವರನ್ನು ಸ್ವಾಗತಿಸಲು ನೂರಾರು ಫ್ಲೆಕ್ಸ್‌ ಕಟೌಟ್‌ಗಳನ್ನು ಕಲಬುರಗಿ ನಗರದಲ್ಲಿ ಹಾಕಲಾಗಿದೆ.

ಇದನ್ನೂ ಓದಿ; ಮಂಡ್ಯದಲ್ಲಿ‌‌ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಫಿಕ್ಸ್

ಸಮಾವೇಶಕ್ಕೂ ಮೊದಲು ಮೋದಿ ರೋಡ್‌ ಶೋ;

ಮಧ್ಯಾಹ್ನ 2.15ಕ್ಕೆ ಎನ್‌ವಿ ಕಾಲೇಜು ಮೈದಾನದಲ್ಲಿ ಸಮಾವೇಶ ಶುರುವಾಗಲಿದೆ.. ಅದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ಕಲಬುರಗಿ ನಗರದಲ್ಲಿ ಬೃಹತ್‌ ರೋಡ್‌ ಶೋ ನಡೆಸಲಿಸಿದ್ದಾರೆ.. ಇದಕ್ಕಾಗಿ ಸಕಲಿ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.. ರೋಡ್‌ ಶೋ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಮೋದಿ ರೋಡ್‌ ಶೋ ಮಾಡುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ; ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ; ತುಮಕೂರಲ್ಲಿ ನಡೆದಿದ್ದಾದ್ರೂ ಏನು..?

ಮಧ್ಯಾಹ್ನ 2.05ಕ್ಕೆ ಸರಿಯಾಗಿ ಮೋದಿ ರೋಡ್‌ ಶೋ ಆರಂಭಿಸಲಿದ್ದಾರೆ.. ಸುಮಾರು ಹತ್ತು ನಿಮಿಷಗಳ ಕಾಲ ಅವರು ರೋಡ್‌ ಶೋ ನಡೆಸಿ, ಜನರತ್ತ ಕೈಬೀಸಲಿದ್ದಾರೆ..  ಕಲಬುರಗಿ ಡಿ.ಆರ್ ಮೈದಾನದಿಂದ ಎಸ್​ಪಿ ಕಚೇರಿ ರಸ್ತೆ, ಅಲ್ಲಿಂದ ಆರ್ಚಿಡ್ ಮಾಲ್ ಬಳಿ ಬಂದು ಅಲ್ಲಿ ಮೋದಿಯವರು ನೆರೆದಿರುವ ಜನರ ಕಡೆ ಕೈಬೀಸಲಿದ್ದಾರೆ. ನಂತರ ಅಲ್ಲಿಂದ ಎಸ್.ಎಂ. ಪಂಡಿತ್ ರಂಗಮಂದಿರ ಕಾರ್ನರ್‌ನಲ್ಲಿ ನಿಲ್ಲಿಸಿ ಅಲ್ಲಿಯೂ ಕೂಡಾ ಮೋದಿ ಜನರತ್ತ ಕೈಬೀಸಲಿದ್ದಾರೆ. ಅನಂತರ ಸಾರ್ವಜನಿಕ ಉದ್ಯಾನವನ ಒಳಗಡೆ ರಸ್ತೆಯಿಂದ ರೋಟರಿ ಕ್ಲಬ್ ರಸ್ತೆ, ಅಲ್ಲಿಂದ ನೇರವಾಗಿ ಎನ್.ವಿ. ಮೈದಾನಕ್ಕೆ ಪ್ರಧಾನಿ ಮೋದಿ ಬರಲಿದ್ದದಾರೆ.. 2:15 ನಿಮಿಷಕ್ಕೆ ಸರಿಯಾಗಿ ಮೋದಿಯವರು ಸಮಾವೇಶದ ವೇದಿಕೆಗೆ ಆಗಮಿಸಲಿದ್ದಾರೆ 45 ನಿಮಿಷ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಮೋದಿಯವರು ಅಲ್ಲಿಂದ ಹೊರಡಲಿದ್ದಾರೆ.

ಇದನ್ನೂ ಓದಿ; ಇಡಿ ದಾಳಿ ನಡೆಸಿ ಬಿಜೆಪಿಗೆ ದೇಣಿಗೆ ನೀಡಲು ಬೆದರಿಕೆ; ಮಲ್ಲಿಕಾರ್ಜುನ ಖರ್ಗೆ ಆರೋಪ

 

Share Post