NationalPolitics

ಬಿಜೆಪಿ, ಕಾಂಗ್ರೆಸ್‌ಗೆ ಪರ್ಯಾಯ; ಹೊಸ ರಾಷ್ಟ್ರೀಯ ಪಕ್ಷ ಕಟ್ಟಲು ಕೆಸಿಆರ್‌ ಚಿಂತನೆ

ಹೈದರಾಬಾದ್; ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ಹಾಗೂ ತೆಲಂಗಾಣ ಸಿಎಂ ಕೆ.ಚಂದ್ರಶೇಖರರಾವ್‌ ಅವರು ಹೊಸ ರಾಷ್ಟ್ರೀಯ ಪಕ್ಷ ಹುಟ್ಟುಹಾಕಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಜೂನ್‌ 19 ರಂದು ಟಿಆರ್‌ಎಸ್‌ ಪಕ್ಷ ಕಾರ್ಯಕಾರಿಣಿ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಹೊಸ ಪಕ್ಷದ ರಚನೆ ಬಗ್ಗೆ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪರ್ಯಾಯವಾಗಿ ಕೇಂದ್ರದಲ್ಲಿ ಹೊಸ ಶಕ್ತಿ ರೂಪಿಸಲು ಕೆಸಿಆರ್‌ ಹಲವು ದಿನಗಳಿಂದ ಪ್ರಯತ್ನ ಮಾಡುತ್ತಿದ್ದರು. ಈ ಸಂಬಂಧ ಹಲವು ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿ ಮಾಡಿದ್ದರು. ಇದೀಗ ಹೊಸ ರಾಷ್ಟ್ರೀಯ ಪಕ್ಷವನ್ನೇ ಹುಟ್ಟುಹಾಕಲು ತೀರ್ಮಾನಿಸಿದ್ದಾರೆ. ಇದಕ್ಕೆ ಭಾರತ್‌ ರಾಷ್ಟ್ರ ಸಮಿತಿ ಎಂದು ಹೆಸರಿಡಲು ತೀರ್ಮಾನ ಮಾಡಲಾಗಿದ್ದು, ಶೀಘ್ರದಲ್ಲೇ ಈ ಹೆಸರು ನೋಂದಣಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಪಕ್ಷದ ಚಿನ್ಹೆಯಾಗಿ ಟಿಆರ್‌ಎಸ್‌ ಪಕ್ಷದ ಕಾರು ಚಿನ್ಹೆಯನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ರಾಷ್ಟ್ರೀಯ ಪಕ್ಷ ಉದಯವಾದ ಬಳಿಕ ಟಿಆರ್‌ಎಸ್‌ ಪಕ್ಷ ಇರುತ್ತದಾ..? ಇರಲ್ವಾ ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

Share Post