BengaluruCrime

Idli guru; ಪ್ರಾಂಚೈಸಿ ಹೆಸರಿನಲ್ಲಿ ವಂಚನೆ; ಇಡ್ಲಿ ಗುರು ಮಾಲೀಕ ಅರೆಸ್ಟ್‌!

ಬೆಂಗಳೂರು; ʻಇಡ್ಲಿ ಗುರುʼ ಹೋಟೆಲ್‌ ಮಾಲೀಕನ ವಿರುದ್ಧ ಇತ್ತೀಚೆಗೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಅಂದಿನಿಂದ ತಲೆ ಮರೆಸಿಕೊಂಡಿದ್ದ ಇಡ್ಲಿಗುರು ಮಾಲೀಕ ಕಾರ್ತಿಕ್‌ ಶೆಟ್ಟ ಇಂದು ಬಂಧನವಾಗಿದೆ. ಮುಂಬೈನಲ್ಲಿ ಅಡಗಿ ಕುಳಿತಿದ್ದ ಕಾರ್ತಿಕ್‌ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದು, ಬೆಂಗಳೂರಿಗೆ ಕರೆತರುತ್ತಿದ್ದಾರೆ.

ಇದನ್ನೂ ಓದಿ; Jayapradha; ನಟಿ, ರಾಜಕಾರಣಿ ಜಯಪ್ರದಾ ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ; ಯಾಕೆ ಗೊತ್ತಾ..?

ಕಾರ್ತೀಕ್‌ ಶೆಟ್ಟಿ ದಂಪತಿ ವಿರುದ್ಧ ದೂರು; 

ಕಾರ್ತೀಕ್‌ ಶೆಟ್ಟಿ ಹಾಗೂ ಅವರ ಪತ್ನಿ ಮಂಜುಳಾ ಇಬ್ಬರೂ ಸೇರಿ ಇಡ್ಲಿ ಗುರು ಮೊಬೈಲ್‌ ಹೋಟೆಲ್‌ಗಳನ್ನು ಶುರು ಮಾಡಿದ್ದರು.. ಇದು ಸ್ವಲ್ಪ ಫೇಮಸ್‌ ಆದ ಮೇಲೆ, ಫ್ರಾಂಚೈಸಿ ಕೊಡಲು ಶುರು ಮಾಡಿದ್ದರು.. ಆದ್ರೆ ಇದ್ರಲ್ಲಿ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇತ್ತೀಚೆಗೆ ಕೆಲವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ತಲೆಮರೆಸಿಕೊಂಡಿದ್ದರು.

 

ಇದನ್ನೂ ಓದಿ; Vibhakar shastri; ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ; ಬಿಜೆಪಿ ಸೇರಿದ ಶಾಸ್ತ್ರಿ ಮೊಮ್ಮಗ!

ಚೇತನ್‌ ಎಂಬುವವರಿಂದ ದೂರು ದಾಖಲು;

ಚೇತನ್‌ ಎಂಬುವವರು ಇತ್ತೀಚೆಗೆ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಡ್ಲಿ ಗುರು ಮಾಲೀಕ ಕಾರ್ತೀಕ್‌ ಶೆಟ್ಟಿಗೆ ಚೇತನ್‌ ಎಂಬುವವರು ಮೂರು ಲಕ್ಷ ರೂಪಾಯಿ ಕೊಟ್ಟು ಫ್ರಾಂಚೈಸಿ ತೆಗೆದುಕೊಂಡಿದ್ದರು.. ಇದಕ್ಕಾಗಿ ಚೇತನ್‌ಗೆ ಫುಡ್‌ ಕಾರ್ಟ್‌ ನೀಡಲಾಗಿತ್ತು… ಆದ್ರೆ ಹೇಳಿದಂತೆ ಸರಿಯಾಗಿ ವ್ಯಾಪಾರ ಆಗುತ್ತಿರಲಿಲ್ಲ… ಹೀಗಾಗಿ ವ್ಯಾಪಾರ ಬೇರೆಡೆ ಶಿಫ್ಟ್‌ ಮಾಡೋದಾಗಿ ಹೇಳಿದ್ದರು. ಜೊತೆಗೆ ಕಮೀಷನ್‌ ಸಹಾ ನೀಡೋದಾಗಿ ಹೇಳಿದ್ದರಂತೆ.. ಆದ್ರೆ ಯಾವುದನ್ನೂ ಮಾಡಿಕೊಟ್ಟಿಲ್ಲ ಎಂದು ಚೇತನ್‌ ಆರೋಪ ಮಾಡಿ, ಕಾರ್ತೀಕ್‌ ಶೆಟ್ಟಿ ಹಾಗೂ ಆತನ ಪತ್ನಿ ಮಂಜುಳಾ ವಿರುದ್ಧ ದೂರು ದಾಖಲಿಸಿದ್ದರು.

ಇದನ್ನೂ ಓದಿ;Dr.C.N.Mnajunath; ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್‌?

ಕಾರ್ತಿಕ್ ಶೆಟ್ಟಿ, ಅವರ ಪತ್ನಿ ಮಂಜುಳಾ, ತಂದೆ ಬಾಬು ಶೆಟ್ಟಿ ಹಾಗೂ ಹೋಟೆಲ್ ಸಿಬ್ಬಂದಿ ದಿವಾಕರ್ ಎಂಬಾತನ ವಿರುದ್ಧ ಎಫ್​ಐ ಆರ್ ದಾಖಲಾಗಿತ್ತು. ದೂರು ದಾಖಲಾಗುತ್ತಿದ್ದಂತೆ ಕಾರ್ತೀಕ್‌ ಶೆಟ್ಟಿ ಮುಂಬೈಗೆ ಪರಾರಿಯಾಗಿದ್ದರು.

Share Post