CinemaNational

ತೆಲುಗು ಚಿತ್ರರಂಗದ ಕಾರ್ಯಕಾರಿ ನಿರ್ಮಾಪಕಿ ಆತ್ಮಹತ್ಯೆ!

ಟಾಲಿವುಡ್ ಇಂಡಸ್ಟ್ರಿಯಲ್ಲಿ ಕೆಟ್ಟ ಘಟನೆಯೊಂದು ನಡೆದಿದೆ. ತೆಲುಗು ಚಿತ್ರರಂಗದ ಕಾರ್ಯಕಾರಿ ನಿರ್ಮಾಪಕಿ ಸ್ವಪ್ನಾ ವರ್ಮಾ (33) ಹೈದರಾಬಾದ್‌ನ ಮಾದಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾವೂರಿ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸ್ವಪ್ನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ತನ್ನ ಫ್ಲಾಟ್‌ನ ಬಾಗಿಲಿಗೆ ಬೀಗ ಹಾಕಿ ನೇಣು ಬಿಗಿದುಕೊಂಡಿದ್ದಾರೆ.

ಆಕೆಯ ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ನೋಡಿದಾಗ ಸ್ಪಪ್ನಾ ವರ್ಮಾ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡಿದೆ. ಆರ್ಥಿಕ ತೊಂದರೆಯಿಂದ ಸ್ವಪ್ನಾ ವರ್ಮಾ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ..

ಆರು ತಿಂಗಳಿಂದ ಚಿತ್ರಗಳ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸ್ವಪ್ನಾ ವರ್ಮಾ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ವಪ್ನವರ್ಮಾ ಅವರ ಹುಟ್ಟೂರು ರಾಜಮಂಡ್ರಿ, ಆದರೆ ಅವರು ಮೂರು ವರ್ಷಗಳ ಹಿಂದೆ ಹೈದರಾಬಾದ್ ನಗರಕ್ಕೆ ಬಂದು ಕಾರ್ಯಕಾರಿ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದಿಂದ ಮಾದಾಪುರದ ಕಾವೂರಿ ಹಿಲ್ಸ್‌ನಲ್ಲಿ ನೆಲೆಸಿದ್ದರು.

 

Share Post