National

ಪಿಎಂ ಕೇರ್ಸ್‌ ಫಾರ್‌ ಚಿಲ್ಡ್ರೆನ್‌ ಯೋಜನೆಗೆ ಪ್ರಧಾನಿ ಚಾಲನೆ

ನವದೆಹಲಿ; ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ನೆರವಿಗಾಗಿ ಕೇಂದ್ರ ಸರ್ಕಾರ, ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಯಡಿ ಇವತ್ತು ಶಾಲೆಗೆ ತೆರಳುವ ಫಲಾನುಭವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗಿದೆ.

ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಈ ಯೋಜನೆಗೆ ಚಾಲನೆ ನೀಡಿದರು. ಸ್ಕಾಲರ್‌ಶಿಪ್‌ಗೆ ಸಂಬಂಧಿಸಿದ ಪೋಸ್ಟ್‌ ಆಫೀಸ್‌ ಪಾಸ್‍ಬುಕ್ ಜೊತೆಗೆ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಕೂಡಾ ಮಕ್ಕಳಿಗೆ ಸಿಗಲಿದೆ.

2020 ಮಾರ್ಚ್ 11 ರಿಂದ 2022ರ ಮಾರ್ಚ್ 28ರ ಅವಧಿಯಲ್ಲಿ ಕೋವಿಡ್‍ನಿಂದ ಸಾವನ್ನಪ್ಪಿದವರ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಸಮಗ್ರ ರಕ್ಷಣೆಯ ಭಾಗವಾಗಿ ಈ ಮಕ್ಕಳಿಗೆ ವಸತಿ, ವಿದ್ಯೆ, ಸ್ಕಾಲರ್‌ಶಿಪ್‌  ಸಿಗಲಿದೆ. ಉನ್ನತ ಶಿಕ್ಷಣಕ್ಕೂ ನೆರವು ಸಿಗಲಿದೆ.

23 ವರ್ಷಕ್ಕೆ ಬಂದಾಗ ಆರ್ಥಿಕವಾಗಿ ಸ್ವಯಂಸಮೃದ್ಧಿ ಹೊಂದಲು 10 ಲಕ್ಷ ರೂಪಾಯಿ ನೆರವು ಕೂಡಾ ಈ ಯೋಜನೆಯಡಿ ಸಿಗಲಿದೆ.

Share Post