Politics

ವಿಶ್ವದಲ್ಲೇ ದಾಖಲೆಯ ಮತದಾನ; ಈ ಬಾರಿ 64.2 ಕೋಟಿ ಮಂದಿಯಿಂದ ಮತ ಚಲಾವಣೆ

ನವದೆಹಲಿ; ಈ ಬಾರಿ ವಿಶ್ವದಲ್ಲೇ ದಾಖಲೆಯ ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.. ನಾಳೆ ಮತ ಎಣಿಕೆ ನಡೆಯುವ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಈ ಬಾರಿ ಅತಿಹೆಚ್ಚು ಮತದಾನವಾಗಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.. ಲೋಕಸಭಾ ಚುನಾವಣೆಯ ಸಾರ್ವಕಾಲಿಕ ದಾಖಲೆಯ ವಿವರಗಳನ್ನು ಅವರು ಹಂಚಿಕೊಂಡಿದ್ದಾರೆ.

ಲೋಕಸಭೆಗೆ ನಡೆದ ಮತದಾನದಲ್ಲಿ ಭಾರತ ವಿಶ್ವದಾಖಲೆ ನಿರ್ಮಾಣ ಮಾಡಿದೆ. ಒಟ್ಟು 64.2 ಕೋಟಿ ಮತದಾರರು ಈ ಬಾರಿ ಮತ ಚಲಾವಣೆ ಮಾಡಿದ್ದಾರೆ.. ವಿಶ್ವದ ಯಾವುದೇ ದೇಶದಲ್ಲೂ ಇಷ್ಟೊಂದು ಮತದಾನ ಆಗಿಲ್ಲ ಎಂದು ರಾಜೀವ್‌ ಕುಮಾರ್‌ ಹೇಳಿದ್ದಾರೆ.. G20 ದೇಶಗಳ ಒಂದೂವರೆ ಪಟ್ಟು ಮತದಾನ ಭಾರತದಲ್ಲಿ ಆಗಿದೆ ಎಂದು ರಾಜೀವ್‌ ಕುಮಾರ್‌ ಮತ ಚಲಾಯಿಸಿದ ಮತದಾರರಿಗೆ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದರು.
31 ಕೋಟಿಗೂ ಹೆಚ್ಚಿನ ಮಹಿಳೆಯರು ಈ ಬಾರಿಯ ಲೋಕಸಭಾ  ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ… ಇದೂ ಕೂಡಾ ಒಂದು ದಾಖಲೆಯೇ ಎಂದ ರಾಜೀವ್‌ ಕುಮಾರ್‌ , ಮಹಿಳೆಯರ ಬಗ್ಗೆ ಅಗೌರವಯುತವಾಗಿ ಮಾತನಾಡಬೇಡಿ ಎಂದು ರಾಜಕೀಯ ಪಕ್ಷಗಳಿಗೆ ಹೇಳಿದ್ದೆವು.. ಅದರಂತೆ ಈ ಬಾರಿ ಮಹಿಳೆಯರಿಗೆ ಮನ್ನಣೆ ಸಿಗಲಿದೆ ಎಂದು ಹೇಳಿದರು.. ಐತಿಹಾಸಿಕ ಚುನಾವಣೆಯನ್ನು ನಡೆಸಿದ್ದಕ್ಕೆ ನಮಗೆ ಖುಷಿ ಇದೆ ಎಂದು ರಾಜೀವ್‌ ಕುಮಾರ್‌, ಚುನಾವಣಾ ಸಿಬ್ಬಂದಿಯನ್ನು ನಾವು ಶ್ಲಾಘಿಸುತ್ತೇವೆ ಎಂದಿದ್ದಾರೆ.

 

Share Post