ಮಲಗಿದ್ದಾಗ ಗಂಡಾಗಿದ್ದ, ಎದ್ದು ನೋಡಿದರೆ ಹೆಣ್ಣಾಗಿ ಬದಲಾಗಿದ್ದ!; ಏನಿದು ವಿಚಿತ್ರ..?
ಆತ ಎಂದಿನಂತೆ ಮಲಗಿದ್ದ.. ಆದ್ರೆ ಆ ಸಮಯದಲ್ಲಿ ಅದೇ ಮಾಡಿದರೋ ಏನೋ ಗೊತ್ತಿಲ್ಲ.. ಆತನ ಲಿಂಗಪರಿವರ್ತನೆ ಮಾಡಿಬಿಡಲಾಗಿತ್ತು.. ವೈದ್ಯರು ಪುರುಷನನ್ನು ಆತನಿಗೆ ಗೊತ್ತಿಲ್ಲದೆ ಹೆಣ್ಣಾಗಿ ಪರಿವರ್ತಿಸಿದ್ದರು.. ಆತ ಎದ್ದು ನೋಡಿದಾಗ ಹೌಹಾರಿದ್ದ.. ಇದನ್ನು ಮಾಡಿಸಿದ್ದ ಆತನ ಸ್ನೇಹಿತನೇ ಆಗಿದ್ದ.. ಈ ಘಟನೆ ನಡೆದದ್ದು ಉತ್ತರ ಪ್ರದೇಶದ ಮನ್ಸೂರ್‌ಪುರದ ಬೇಗ್ರಾಜ್‌ಪುರ ವೈದ್ಯಕೀಯ ಕಾಲೇಜಿನಲ್ಲಿ..
ಸಂಜಕ್ ಗ್ರಾಮದ ನಿವಾಸಿ ಮುಜಾಹಿದ್ (20) ಎಂಬಾತನೇ ಹೆಣ್ಣಾಗಿ ಬದಲಾಗಿರುವ ವ್ಯಕ್ತಿ.. ಈತನಿಗೆ ಗೊತ್ತಿಲ್ಲದೆ ಶಸ್ತ್ರಚಿಕಿತ್ಸೆ ಮಾಡಿ ಲಿಂಗ ಪರಿವರ್ತನೆ ಮಾಡಿದ್ದಾರಂತೆ.. ಮುಜಾಹಿದ್ ಕುಟುಂಬಕ್ಕೆ ಸಾಕಷ್ಟು ಆಸ್ತಿ ಇದೆ.. ಅದನ್ನು ಹೊಡೆಯುವ ಸಲುವಾಗಿ ಓಂ ಪ್ರಕಾಶ್ ಎಂಬಾತ ಈ ಪ್ಲ್ಯಾನ್ ಮಾಡಿದ್ದ ಎಂದು ಹೇಳಲಾಗಿದೆ.. ಮುಜಾಹಿದ್‌ನನ್ನು ಹೆಣ್ಣಾಗಿ ಪರಿವರ್ತಿಸಿ, ನಂತರ ಆತನ ಮನವೊಲಿಸಿ ಮದುವೆಯಾಗಿ ಆತನ ಆಸ್ತಿ ಹೊಡೆಯಲು ಸಂಚು ಮಾಡಿದ್ದ ಎಂದು ತಿಳಿದುಬಂದಿದೆ..
ಸರ್ಜರಿಯಾದ ಮೇಲೆ ಮುಜಾಹಿದ್ ಈ ಬಗ್ಗೆ ಓಂಪ್ರಕಾಶ್ ಹೇಳಿದ್ದಾನೆ.. ನಾನೇ ಮದುವೆಯಾಗುತ್ತೇನೆ.. ಈ ಸಂಬಂಧ ವಕೀಲರ ಜೊತೆಗೂ ಮಾತನಾಡಿದ್ದೇನೆ ಎಂದು ಹೇಳಿದ್ದಾನೆ.. ಇದರಿಂದ ಆಕ್ರೋಶಗೊಂಡ ಮುಜಾಹಿದ್ ಪೊಲೀಸರಿಗೆ ದೂರು ನೀಡಿದ್ದಾನೆ.. ಜೊತೆಗೆ 2 ಕೋಟಿ ರೂಪಾಯಿ ಪರಿಹಾರ ಕೂಡಾ ಕೇಳಿದ್ದಾನೆ..