NationalPolitics

PAYCM ರೀತಿಯಲ್ಲೇ ತೆಲಂಗಾಣದಲ್ಲಿ ಕಾಂಗ್ರೆಸ್‌ನಿಂದ BOOKMYCM ಅಭಿಯಾನ

ಹೈದರಾಬಾದ್‌; ಕರ್ನಾಟಕದಲ್ಲಿ ಚುನಾವಣೆಗೆ ಮೊದಲು ಕಾಂಗ್ರೆಸ್‌ PAYCM ಅಭಿಯಾನ ನಡೆಸಿತ್ತು. ಈ ಹಿಂದಿನ ಬಿಜೆಪಿ ಸರ್ಕಾರ 40 ಪರ್ಸೆಂಟ್‌ ಕಮೀಷನ್‌ ಪಡೆಯುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಇದನ್ನು ಜನರಿಗೆ ಮನವರಿಕೆ ಮಾಡಿಕೊಡಲು PAYTM ಕ್ಯೂಆರ್‌ ಕೋಡ್‌ನಲ್ಲಿ PAYCM ಎಂದು ಮಾಡಿ ಪೋಸ್ಟರ್‌ ಗಳನ್ನು ಎಲ್ಲೆಡೆ ಅಂಟಿಸಲಾಗಿತ್ತು. ಈ ಅಭಿಯಾನ ದೇಶಾದ್ಯಂತ ಸದ್ದು ಮಾಡಿತ್ತು. ಇದೀಗ ತೆಲಂಗಾಣಕ್ಕೂ ಇಂತಹದ್ದೇ ಅಸ್ತ್ರ ಕಾಂಗ್ರೆಸ್‌ ಬಳಸಿದೆ.

ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ಅವರ ವಿರುದ್ಧ BOOKMYCM ಅಭಿಯಾನ ಶುರು  ಮಾಡಿದೆ. ಜೋಕರ್‌ ಚಿತ್ರದ ಪೋಸ್ಟರ್‌ ನಕಲು ಮಾಡಿ ಅದ್ರಲ್ಲಿ ಕೆಸಿಆರ್‌ ಚಿತ್ರವನ್ನು ಎಡಿಟ್‌ ಮಾಡಲಾಗಿದೆ. ಜೊತೆ 30 ಪರ್ಸೆಂಟ್‌ ಕಮೀಷನ್‌ ಮೂಲಕ ಈ ಚಿತ್ರದ ಟಿಕೆಟ್‌ ಪಡೆಯಿರಿ ಎಂದು ಬರೆಯಲಾಗಿದೆ. ಈ ಪೋಸ್ಟರ್‌ಗಳು ಎಲ್ಲೆಡೆ ಹರಿದಾಡುತ್ತಿವೆ.

 

Share Post