ಡೇಟಿಂಗ್ ಆಪ್ ಮೋಹಿನಿಗೆ 6 ಕೋಟಿ ಸುರಿದ ಬ್ಯಾಂಕ್ ಮ್ಯಾನೇಜರ್
ಬೆಂಗಳೂರು; ಡೇಟಿಂಗ್ ಹೆಸ್ರಲ್ಲಿ ಸುಂದರವಾದ ಯುವತಿಯರು ಮರಳು ಮಾಡೋದು, ಕೋಟಿ ಕೋಟಿ ಲಪಟಾಯಿಸೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಇದು ಗೊತ್ತಿದ್ದರೂ ಅಕ್ಷರಸ್ಥರೇ ಇಂತ ಮಾಯಾಂಗನೆಯರ ಬಲೆಗೆ ಬಿದ್ದು ಎಲ್ಲವನ್ನೂ ಕಳೆದುಕೊಂಡು ಬೀದಿಪಾಲಾಗುತ್ತಿದ್ದಾರೆ. ಡೇಟಿಂಗ್ ಆಪ್ ಒಂದರಲ್ಲಿ ಚಾಟ್ ಮಾಡುತ್ತಿದ್ದ ಸುಂದರ ಯುವತಿಯನ್ನು ನಂಬಿದ ಬೆಂಗಳೂರಿನ ಬ್ಯಾಂಕ್ ಮ್ಯಾನೇಜರ್ ಒಬ್ಬರು ಬರೋಬ್ಬರಿ ಆರು ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಹೌದು, ಬ್ಯಾಂಕ್ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಹನುಮಂತನಗರದ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಹರಿಶಂಕರ್ ಅವರನ್ನು ಪೊಲೀಸರು ಬಂಧಿಸಿದ್ದರು. ಅವರ ವಿಚಾರಣೆ ವೇಳೆ ಡೇಟಿಂಗ್ ಮಾಯಾಂಗನೆಗೆ ಮಾರುಹೋಗಿ ಎಲ್ಲಾ ಹಣವನ್ನು ಆಖೆಗೆ ಸುರಿದಿರೋದಾಗಿ ಅವರು ಪೊಲೀಸರ ಮುಂದೆ ಒಪ್ಪಿಕೊಂಡಿದ್ದು, ಬ್ಯಾಂಕ್ ವಂಚನೆ ಪ್ರಕರಣಕ್ಕೆ ಟ್ವೀಸ್ಟ್ ಸಿಕ್ಕಿದೆ.
ಆರೋಪಿ ಹರಿಶಂಕರ್‌ಗೆ ಡೇಟಿಂಗ್ ಆಪ್‍ನ ಮೂಲಕ ಯುವತಿಯರ ಪರಿಚಯ ಮಾಡಿಕೊಂಡು ಮಸಾಲ ವೀಡಿಯೋ ನೋಡುವ ಹುಚ್ಚು ಹಿಡಿದಿತ್ತು. ಈ ವೇಳೆ ವೆಸ್ಟ್ ಬೆಂಗಾಲ್‍ನ ಹುಡುಗಿಯೊಬ್ಬಳಿಗೆ ಹರಿಶಂಕರ್ ಮಾರುಹೋಗಿದ್ದರು. ಆಕೆಯ ಸೌಂದರ್ಯದಕ್ಕೆ ಮನಸಸೋತು, ಆಕೆ ಕೇಳಿದಷ್ಟು ಹಣ ನೀಡುತ್ತಾ ಬಂದಿದ್ದರು. ಮೊದಲಿಗೆ ತನ್ನ ಸ್ವಂತ ಖಾತೆಯಲ್ಲಿದ್ದ ಸುಮಾರು 12 ಲಕ್ಷ ರೂಪಾಯಿಯನ್ನು ಹರಿಶಂಕರ್ ಆ ಮಾಯಾಂಗನೆಗೆ ವರ್ಗಾಯಿಸಿದ್ದರು. ಆಕೆ ಇನ್ನೂ ಏನೇನು ಮೋಡಿ ಮಾಡಿದಳೋ ಏನೋ, ಠೇವಣಿದಾರರಾದ ಅನಿತಾ ಅವರ ಎಫ್‍ಡಿ ಅಕೌಂಟ್‍ನ ಮೇಲೆ ಲೋನ್ ತೆಗೆದು, 5.69 ಕೋಟಿಯನ್ನು ಆಕೆಗೆ ಸಂದಾಯ ಮಾಡಿದ್ದಾನೆ ಎನ್ನಲಾಗಿದೆ. ಈ ಕೆಲಸ ಮಾಡೋದಕ್ಕೆ ಬ್ಯಾಂಕ್ ಕ್ಲರ್ಕ್ ಮುನಿರಾಜು ಅವರನ್ನು ಬಳಸಿಕೊಂಡಿದ್ದ ಎಂಬ ಸತ್ಯ ವಿಚಾರಣೆ ವೇಳೆ ತಿಳಿದುಬಂದಿದೆ.
ಡೇಟಿಂಗ್ ಆಪ್‍ನಲ್ಲಿ ಪರಿಚಯ ಆದವಳು ತುಂಬಾ ಸುಂದರವಾಗಿದ್ದಳು. ಅವಳ ಪ್ರೀತಿಯ ಪಾಶಕ್ಕೆ ಬಿದ್ದಿದ್ದೆ. ಅವಳ ಮೋಹದಿಂದ ಈ ಹಣವನ್ನು ಕಳೆದುಕೊಂಡೆ ಎಂದು ಬ್ಯಾಂಕ್ ಮ್ಯಾನೇಜರ್ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ. ಠೇವಣಿದಾರರು ಕೊಟ್ಟ ದೂರಿನ ಮೇಲೆ ಹರಿಶಂಕರ್ ಅನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ