CrimeNational

ಕಾಂಗ್ರೆಸ್‌ನ ಶಾಸಕನ ಪತ್ನಿ ಆತ್ಮಹತ್ಯೆ!; ಗಂಡನಿಗೆ ವಿಡಿಯೋ ಕಾಲ್‌ ಮಾಡಿದ್ದ ಪತ್ನಿ!

ಕರೀಂನಗರ; ತೆಲಂಗಾಣದ ಕಾಂಗ್ರೆಸ್‌ ಶಾಸಕನ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಕರೀಂನಗರ ಜಿಲ್ಲೆಯ ಚೊಪ್ಪದಂಡಿ ಶಾಸಕ ಮೇಡಿಪಲ್ಲಿ ಸತ್ಯಂ ಅವರ ಪತ್ನಿ ರೂಪಾದೇವಿ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.. ಆತ್ಮಹತ್ಯೆಗೂ ಮೊದಲು ಗಂಡನಿಗೆ ವಿಡಿಯೋ ಕಾಲ್‌ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗಿ ಹೇಳಿದ್ದಾರೆ.. ಗಂಡ ಮನೆಗೆ ಓಡೋಡಿ ಬರುವಷ್ಟರಲ್ಲಿ ಆಕೆ ನೇಣಿಗೆ ಕೊರಳೊಡ್ಡಿ ಇಹಲೋಕ ತ್ಯಜಿಸಿದ್ದಾಳೆ..

ಹೈದರಾಬಾದ್‌ನ ಅಲ್ವಾಲ್‌ ಪಂಚಶೀಲಾ ಕಾಲೋನಿಯ ಮನೆಯಲ್ಲಿ ರೂಪಾದೇವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..ರೂಪಾದೇವಿಯವರು ಸರ್ಕಾರಿ ಶಾಲೆ ಶಿಕ್ಷಕಿಯಾಗಿದ್ದು, 12 ವರ್ಷದ ಹಿಂದೆ ಸದ್ಯ ಕಾಂಗ್ರೆಸ್‌ ಶಾಸಕನಾಗಿರುವ ಮೇಡಿಪಲ್ಲಿ ಸತ್ಯಂ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು.. ಇವರಿಗೆ ಯೋಜಿತ್ (11) ಮತ್ತು ರಿಷಿಕಾ ಶ್ರೀ (9) ಎಂಬ ಇಬ್ಬರು ಮಕ್ಕಳಿದ್ದಾರೆ.. ಇವರಿಬ್ಬರ ನಡುವೆ ಇತ್ತೀಚೆಗೆ ಮನಸ್ತಾಪಗಳು ಇದ್ದವು ಎಂದು ಹೇಳಲಾಗುತ್ತಿದೆ.. ಈ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ..

ರೂಪಾಯಿದೇವಿಯವರು ಮುನಿರಾಬಾದ್‌ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.. ಒಂದು ವರ್ಷದಿಂದ ಅವರು ಕೊಂಪಲ್ಲಿ ಪೇಟ್ ಬಶೀರಾಬಾದ್‌ನ ದವೇರಿಯಾ ವಿಲ್ಲಾಸ್‌ನಲ್ಲಿ ವಾಸವಿದ್ದರು.. ಆದ್ರೆ ತಿಂಗಳ ಹಿಂದಷ್ಟೇ ಹೈದರಾಬಾದ್‌ನ ಅಲ್ವಾಲ್‌ನ ಪಂಚಶೀಲಾ ಕಾಲೋನಿ ರಸ್ತೆ ಸಂಖ್ಯೆ 12ಕ್ಕೆ ಸ್ಥಳಾಂತರವಾಗಿದ್ದರು.. ಆದ್ರೆ ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯವಿದ್ದುದರಿಂದ ರೂಪಾದೇವಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ..

ರೂಪಾದೇವಿ ವಿಡಿಯೋ ಕಾಲ್‌ ಮಾಡಿದಾಗ ಶಾಸಕ ಮೇಡಿಪಲ್ಲಿ ಸತ್ಯಂ ಅವರು ತಮ್ಮ ಕ್ಷೇತ್ರ ಚೊಪ್ಪದಂಡಿಯಲ್ಲಿದ್ದರು.. ಕೂಡಲೇ ಅವರು ಹೊರಟುಬಂದಿದ್ದಾನೆ.. ಮನೆಗೆ ಬಂದು ನೋಡುವಷ್ಟರಲ್ಲಿ ರೂಪಾದೇವಿ ನೇಣುಬಿಗಿದುಕೊಂಡಿದ್ದರು.. ಕೂಡಲೇ ಆಕೆಯನ್ನು ಇಳಿಸಿ ಮನೆಯ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು.. ಆದ್ರೆ ಪರೀಕ್ಷೆ ಮಾಡಿದ ವೈದ್ಯರು ರೂಪಾದೇವಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.. ಇದನ್ನು ಕೇಳಿ ಶಾಸಕರು ಪ್ರಜ್ಞೆ ತಪ್ಪಿಬಿದ್ದಿದ್ದಾರೆ..

ರಾಜ್ಯ ಸಚಿವ ಪೊನ್ನಂ ಪ್ರಭಾಕರ್ ಅವರು ಕೊಂಪೆಲಿಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಶಾಸಕರನ್ನು ಮಾತನಾಡಿಸಿದರು.. ಮೇಡ್ಬಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ.

Share Post