CrimeNational

ಅಪಘಾತ ಮಾಡಿ ಅಡ್ಡಾದಿಡ್ಡಿ ಓಡಿಸಿದ; ನಾಲ್ವರ ಸಾವಿಗೆ ಕಾರಣನಾದ!

ಮುಂಬೈ; ವೇಗವಾಗಿ ಬಂದು ಅಪಘಾತ ಮಾಡಿದ ಕಾರು ಚಾಲಕನೊಬ್ಬ ತಪ್ಪಿಸಿಕೊಳ್ಳಲು ಕಾರನ್ನು ಮತ್ತಷ್ಟು ಸ್ಪೀಡ್‌ ಮಾಡಿ ಮೂವರ ಸಾವಿಗೆ ಕಾರಣನಾಗಿದ್ದಾನೆ. ಮುಂಬೈನ ಬಾಂದ್ರಾ ವರ್ಲಿ ಸೀ ಲಿಂಕ್‍ನಲ್ಲಿರುವ ಟೋಲ್ ಪ್ಲಾಜಾದಲ್ಲಿ ಈ ದುರ್ಘಟನೆ ನಡೆದಿದೆ. ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಸರಣಿ ಅಪಘಾತದಲ್ಲಿ ಹಲವು ವಾಹನಗಳು ಜಖಂಗೊಂಡಿವೆ. 

ಬಾಂದ್ರಾ ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರು ಮೊದಲು ಒಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಚಾಲಕ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಕಾರಿನ ವೇಗ ಇನ್ನೂ ಜಾಸ್ತಿ ಮಾಡಿದ್ದಾನೆ. ಇದರಿಂದಾಗಿ ಟೋಲ್‌ ಕ್ಯೂನಲ್ಲಿದ್ದ ಹಲವು ಕಾರಿಗಳಿಗೆ ಅದು ಡಿಕ್ಕಿಯಾಗಿದೆ. ಇದ್ರಿಂದಾಗಿ ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

 

Share Post