ಕಮರಿಗೆ ಬಿದ್ದ ಕಾರು: ಆರು ಮಂದಿ ಸ್ಥಳದಲ್ಲೇ ದುರ್ಮರಣ
ಜಮ್ಮು ಕಾಶ್ಮೀರ: ಸ್ಕಿಡ್ ಆಗಿ ಕಾರು ಕಾಲುವೆಗೆ ಬಿದ್ದು ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿರುವ ಘಟನೆ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ನಗ್ರಿಯಾನಾ ಬಳಿ ನಡೆದಿದೆ. “ಇಕೋ-ವ್ಯಾನ್ (JK17-5089)ನಂಬರಿನ ಕಾರು ರಸ್ತೆಯಿಂದ ಸ್ಕಿಡ್ ಆಗಿ ನಗ್ರಿಯಾನಾ ಬಳಿಯ ಕಮರಿಗೆ ಉರುಳಿ ಬಿದ್ದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ರ. ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ” ಎನ್ನಲಾಗಿದೆ. ಕಿಶ್ತ್ವಾರ್ ಜಿಲ್ಲೆಯ ಥಾಕ್ರಿ ಬ್ಲಾಕ್‌ನ ನಗ್ರಿಯಾನಾ ಕೇಶ್ವಾನ್ ಬಳಿ ಇಂದು ಸಂಜೆ 5:30 ರ ಸುಮಾರಿಗೆ ವ್ಯಾನ್ ಅಪಘಾತಕ್ಕೀಡಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ), ಶಫ್ಕತ್ ಹುಸೇನ್ ಹೇಳಿದ್ದಾರೆ.
ಅಪಘಾತದ ನಂತರ ಕೂಡಲೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಆದರೆ ದುರಾದೃಷ್ಟವಶಾತ್ ಕಾರಿನಲ್ಲಿದ್ದವರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ನಗ್ರಿಯಾನ ನಿವಾಸಿಗಳೆಂದು ಗುರುತಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಕಿಶ್ತ್ವಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (N0 16/22 u/s 279/304) ದಾಖಲಿಸಿದ್ದಾರೆ ಮತ್ತು ತನಿಖೆಯನ್ನು ನಡೆಸುತ್ತಿದ್ದಾರೆ.