CrimeDistricts

8 ಕಿಲೋ ಮೀಟರ್‌ ಕ್ರಮಿಸಿ ಕೊಲೆ ಆರೋಪಿ ಹಿಡಿದುಕೊಟ್ಟ ಶ್ವಾನ..!

ದಾವಣಗೆರೆ; ಪೊಲೀಸ್‌ ಶ್ವಾನವೊಂದು ಬರೋಬ್ಬರಿ ಎಂಟು ಕಿಲೋ ಮೀಟರ್‌ ಕ್ರಮಿಸಿ ಕೊಲೆ ಆರೋಪಿಯೊಬ್ಬನನ್ನು ಹಿಡಿದುಕೊಟ್ಟಿದೆ. ದಾವಣಗೆರೆಯ ಡಾಗ್ ಸ್ಕ್ವಾಡ್ ಕ್ರೈಂ ವಿಭಾಗದ ಶ್ವಾನ ತಾರಾ ಈ ಸಾಧನೆ ಮಾಡಿದೆ.

ಇಲ್ಲಿನ ಸೋಮಶೆಟ್ಟಿಹಳ್ಳಿ ಕ್ರಾಸ್ ಬಳಿ ನರಸಿಂಹ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಆರೋಪಿ ಶಿವಯೋಗೀಶ್ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದ. ಆತ ಶ್ರೀರಾಮನಗರದಲ್ಲಿರುವ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ. ಶ್ವಾನ ತಾರಾ ಕೊಲೆಗೆ ಬಳಸಿದ್ದ ಕಟ್ಟಿಗೆಯನ್ನು ಮೂಸಿ ಕೊಲೆಗಾರನ ಜಾಡು ಹಿಡಿದಿತ್ತು. ಅದು ಎಂಟು ಕಿಲೋ ಮೀಟರ್‌ ಕ್ರಮಿಸಿ ಆರೋಪಿ ಇರುವ ಮನೆಯನ್ನು ಪತ್ತೆ ಮಾಡಿದೆ.

Share Post