ಮುರುಘಾ ಮಠದ ಪ್ರಕರಣಕ್ಕೆ ಟ್ವಿಸ್ಟ್; ಮಠದ ಆಡಳಿತಾಧಿಕಾರಿ ವಿರುದ್ಧ ದೂರು
ಚಿತ್ರದುರ್ಗ; ಒಂದು ಕಡೆ ಇಬ್ಬರು ವಿದ್ಯಾರ್ಥಿನಿಯರು ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಈ ಪ್ರಕರಣ ದಾಖಲಾಗುತ್ತಿದ್ದಂತೆ, ಮಠದ ವಿದ್ಯಾರ್ಥಿನಿಯರ ಹಾಸ್ಟೆಲ್ ಲೇಡಿ ವಾರ್ಡನ್ ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಯತ್ನ ದೂರು ದಾಖಲಿಸಿದ್ದಾರೆ. ಮಾಜಿ ಶಾಸಕ ಹಾಗೂ ಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಅವರ ವಿರುದ್ಧ ಲೇಡಿ ವಾರ್ಡನ್ ಅತ್ಯಾಚಾರ ಯತ್ನ ಕೇಸ್ ದಾಖಲಿಸಿದ್ದಾರೆ/
ಎಸ್.ಕೆ.ಬಸವರಾಜನ್ ಅವರು ಮಠದ ಆಡಳಿತಾಧಿಕಾರಿಯಾಗಿದ್ದರು. ಹಲವು ವರ್ಷಗಳಿಂದ ಸ್ವಾಮೀಜಿ ಹಾಗೂ ಬಸವರಾಜನ್ ನಡುವೆ ಜಟಾಪಟಿ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಬಸವರಾಜನ್ ಅವರನ್ನು ೨೦೦೭ರಲ್ಲಿ ಆಡಳಿತಾಧಿಕಾರಿ ಹುದ್ದೆಯಿಂದ ತೆಗೆಯಲಾಗಿತ್ತು. ಆದ್ರೆ ಅವರು ಕಳೆದ ಮಾರ್ಚ್ ೭ರಂದು ಮತ್ತೆ ಮಠದ ಆಡಳಿತಾಧಿಕಾರಿಯಾಗಿ ಆಗಮಿಸಿದ್ದಾರೆ. ಅವರು ಹಾಸ್ಟೆಲ್‌ನಲ್ಲಿ ಯಾರೂ ಇಲ್ಲದಾಗ ನನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ ಎಂದು ಬಸವರಾಜನ್ ವಿರುದ್ಧ ಲೇಡಿ ವಾರ್ಡನ್ ದೂರು ದಾಖಲಿಸಿದ್ದಾರೆ. ಅಲ್ಲದೆ ಬಸವರಾಜನ್ ಪತ್ನಿ ವಿರುದ್ಧವೂ ಲೇಡಿ ವಾರ್ಡನ್ ದೂರು ನೀಡಿದ್ದಾರೆ.
ಸ್ವಾಮೀಜಿ ವಿರುದ್ಧ ದೂರು ನೀಡಿರುವ ಇಬ್ಬರು ವಿದ್ಯಾರ್ಥಿನಿಯರನ್ನು ಬಸವರಾಜನ್ ಅವರೇ ಮಠಕ್ಕೆ ಕರೆತಂದಿದ್ದರು. ಅವರೇ ಷಡ್ಯಂತ್ರ ಮಾಡಿ ಸ್ವಾಮೀಜಿ ವಿರುದ್ಧ ದೂರು ಕೊಡಿಸಿದ್ದಾರೆ ಎಂಬ ಆರೋಪ ಕೂಡಾ ಮಾಡಲಾಗಿದೆ.