CrimeNational

ಆಸ್ತಿ ವಿಚಾರಕ್ಕೆ ಜಗಳ!; ಸ್ವಂತ ಅಕ್ಕನ ಮೇಲೆ ಗೊಡ್ಡಲಿಯಿಂದ ದಾಳಿ!

ಹೈದರಾಬಾದ್; ವ್ಯಕ್ತಿಯೊಬ್ಬ ಮನೆಯ ಜಾಗದ ವಿಚಾರದಲ್ಲಿ ಜಗಳ ಮಾಡುತ್ತಾ ಸ್ವಂತ ಅಕ್ಕನ ಮೇಲೇ ಗೊಡ್ಡಲಿಯಿಂದ ಮಾರಣಾಂತಿಕ ದಾಳಿ ಮಾಡಿದ್ದಾನೆ.. ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಗಾರ್ಲದಿನ್ನಿ ಬಳಿಯ ಪೆನಕಚರ್ಲದಲ್ಲಿ ನಡೆದಿದೆ.. ಈ ದೃಶ್ಯಗಳು ತುಂಬಾ ಭಯಂಕರವಾಗಿದ್ದು, ಯಾರೋ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ ಲೋಡ್‌ ಮಾಡಿದ್ದಾರೆ.. ಸ್ವಂತ ಅಕ್ಕನನ್ನೇ ದಾರುಣವಾಗಿ ಸಾಯಿಸಲು ಯತ್ನಿಸಿದ ತಮ್ಮನ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ..

ಇದನ್ನೂ ಓದಿ; ಮುಟ್ಟಿದರೆ ದಾಳಿ ಮಾಡುತ್ತದೆ ಸಸ್ಯ..!; ಶತ್ರುಗಳನ್ನು ಹಿಮ್ಮೆಟ್ಟಿಸುವ ಗಿಡ..!

ಪೆನಕಚರ್ಲ ನಿವಾಸಿ ಮೆಹಬೂಬಿ ಎಂಬುವವರ ಮೇಲೆ ಆಕೆಯ ಕಿರಿಯ ಸಹೋದರ ಜಿಲಾನಿ ಭಾಷಾ ದಾಳಿ ಮಾಡಿದ್ದಾರೆ.. ದೊಡ್ಡ ದೊಡ್ಡ ಮರದ ತುಂಡುಗಳನ್ನು ಕತ್ತರಿಸುವ ಗೊಡ್ಡಲಿಯನ್ನು ತೆಗೆದುಕೊಂಡು ಆಕೆಯ ಮೇಲೆ ದಾಳಿ ಮಾಡಿದ್ದಾನೆ.. ಅಕ್ಕನ ಕಾಲುಗಳನ್ನು ಕಡಿಯಲು ಹೋಗಿದ್ದು, ಆಕೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.. ಮೆಹಬೂಬಿ ಹಾಗೂ ಆಕೆಯ ಮಗಳನ್ನು ಅನಂತಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.. ಆರೋಪಿ ಜಿಲಾನಿ ಭಾಷಾನನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ..

Share Post