CrimeNational

ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ; 6 ಮಂದಿ ದುರ್ಮರಣ!

ಮುಂಬೈ; ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ದೊಡ್ಡ ದುರಂತ ನಡೆದುಹೋಗಿದೆ.. ಥಾಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡು 6 ಜನ ಸಾವನ್ನಪ್ಪಿದ್ದಾರೆ.. ದುರಂತದಲ್ಲಿ 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

 ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿ ಎಂಬಲ್ಲಿ ಈ ಕೆಮಿಕಲ್ ಫ್ಯಾಕ್ಟರಿ ಇದೆ.. ಇದರಲ್ಲಿನ ಬಾಯ್ಲರ್ ಸ್ಫೋಟಗೊಂಡಾಗ ದಟ್ಟವಾದ ಹೊಗೆ ಆವರಿಸಿದೆ.. ಒಳಗಿದ್ದವರಿಗೆ ಏನೂ ಕಾಣಿಸಿಲ್ಲ. ನಂತರ ಸ್ಫೋಟದ ಶಬ್ದ ಕೇಳಿಸಿದೆ..

  ಈ ಬಾಯ್ಲರ್ ಸ್ಫೋಟದ ಶಬ್ಧ ಸುಮಾರು 3 ಕಿಲೋ ಮೀಟರ್​​ವರೆಗೆ ಕೇಳಿಸಿದೆ ಎನ್ನಲಾಗಿದೆ. ತಕ್ಷಣ ಜಾಗೃತರಾದ ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗೆ ಹಾಗೂ ಆಸ್ಪತ್ರೆಗೆ ಮಾಹಿತಿ ತಿಳಿಸಿದ್ದಾರೆ.

ಅಂಬರ ಕೆಮಿಕಲ್ ಕಂಪನಿಯ 4 ಬಾಯರ್​​ಗಳು ಸ್ಫೋಟಗೊಂಡ ಪರಿಣಾಮ ಭಾರೀ ಬೆಂಕಿ ಕಾಣಿಸಿಕೊಂಡಿತ್ತು.

Share Post