NationalPolitics

ITV ನೆಟ್‌ವರ್ಕ್‌ ಮುಖ್ಯಸ್ಥ ಕಾರ್ತಿಕೇಯ ಶರ್ಮಾ ರಾಜ್ಯಸಭೆಗೆ ಆಯ್ಕೆ

ಚಂಡೀಗಢ; ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಹರಿಯಾಣ ರಾಜ್ಯಸಭಾ ಚುನಾವಣೆಯಲ್ಲಿ ಐಟಿವಿ ನೆಟ್‌ವರ್ಕ್‌ ಸಂಸ್ಥೆ ಮುಖ್ಯಸ್ಥರಾದ ಕಾರ್ತಿಕೇಯ ಶರ್ಮಾ ಅವರು ರಾಜ್ಯಸಭೆ ಪ್ರವೇಶಿಸಿದ್ದಾರೆ. ಬಿಜೆಪಿ ಹಾಗೂ ಜೆಜೆಪಿ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾರ್ತಿಕೇಯ ಶರ್ಮಾ ಅವರು, ಕಾಂಗ್ರೆಸ್‌ನ ಅಜಯ್‌ ಮಾಕೆನ್‌ ಅವರನ್ನು ಸೋಲಿಸಿದ್ದಾರೆ.

ಕಾಂಗ್ರೆಸ್‌ನ ಇಬ್ಬರು ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಅವರ ಮತಗಳನ್ನು ಅಸಿಂಧು ಮಾಡಬೇಕೆಂದು ಕಾಂಗ್ರೆಸ್‌ ಆಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ ವಿಚಾರ ಕೇಂದ್ರ ಚುನಾವಣಾ ಆಯೋಗದವರೆಗೂ ಹೋಗಿತ್ತು. ಕೊನೆಗೆ ಮಧ್ಯರಾತ್ರಿಯಲ್ಲಿ ಮತ ಎಣಿಕೆ ನಡೆದು ಕಾರ್ತಿಕೇಯ ಶರ್ಮಾ ಅವರು, ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ರಾಜ್ಯಸಭೆಯಲ್ಲಿ ಚಲಾವಣೆಯಾದ 89 ಮತಗಳ ಪೈಕಿ 88 ಮತಗಳು ಸಿಂಧುವಾಗಿದ್ದವು. ಕಾರ್ತಿಕೇಯ ಶರ್ಮಾ ಅವರು 2,934 ಅಂಕಗಳು ಪಡೆದರೆ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಜಯ್‌ ಮಾಕೆನ್‌ 2900 ಅಂಕಗಳನ್ನು ಪಡೆದು ಸೋಲನುಭವಿಸಿದರು.

ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ಮತದಾನ ಮುಕ್ತಾಯಗೊಂಡಿದ್ದು, ಮಧ್ಯರಾತ್ರಿ 12.40ರ ಸುಮಾರಿಗೆ ಎಣಿಕೆಗೆ ಇಸಿಐ ಅನುಮತಿ ನೀಡಿತ್ತು.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾರ್ತಿಕೇಯ ಶರ್ಮಾ, ಮಾಜಿ ಕೇಂದ್ರ ಸಚಿವ ವಿನೋದ್ ಶರ್ಮಾ ಅವರ ಪುತ್ರ ಶರ್ಮಾ ಅವರು ಬಿಜೆಪಿ, ಜೆಜೆಪಿ, ಐಎನ್‌ಎಲ್‌ಡಿ, ಎಚ್‌ಎಲ್‌ಪಿ ಮತ್ತು ಆರು ಸ್ವತಂತ್ರ ಶಾಸಕರ ಬೆಂಬಲವನ್ನು ಹೊಂದಿದ್ದರು.

ಪ್ರಮುಖವಾಗಿ ಬಿಜೆಪಿ 40 ಶಾಸಕರನ್ನು ಹೊಂದಿದೆ ಮತ್ತು ಕಾಂಗ್ರೆಸ್ 31 ಶಾಸಕರನ್ನು ಹೊಂದಿದೆ, ಜೆಜೆಪಿ 10 ಶಾಸಕರನ್ನು ಹೊಂದಿದೆ. ಏಳು ಸ್ವತಂತ್ರ ಶಾಸಕರು ಮತ್ತು ಐಎನ್‌ಎಲ್‌ಡಿ ಮತ್ತು ಎಚ್‌ಎಲ್‌ಪಿಯಿಂದ ತಲಾ ಒಬ್ಬ ಶಾಸಕರಿದ್ದಾರೆ. ಮತದಾನದಿಂದ ದೂರ ಉಳಿದಿದ್ದ ಒಬ್ಬ ಸ್ವತಂತ್ರ ಶಾಸಕ ಬಾಲರಾಜ್ ಕುಂದು ಅವರನ್ನು ಹೊರತುಪಡಿಸಿ, ಕಾರ್ತಿಕೇಯ ಶರ್ಮಾ ಅವರು ಬಿಜೆಪಿಯ ಹೆಚ್ಚುವರಿ ಒಂಬತ್ತು ಮತಗಳು, JJP ಯಿಂದ 10, ಆರು ಸ್ವತಂತ್ರ  ಮತ್ತು INLD ಮತ್ತು HLP ಯ ತಲಾ ಒಂದು ಮತಗಳನ್ನು ಪಡೆದರು.

 

Share Post