Skip to content
Wednesday, May 14, 2025
Latest:
  • ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ ಮಹಿಳೆ!
  • ಕೆಲಸದ ಒತ್ತಡ; ಸಾಫ್ಟ್ವೇರ್ ಇಂಜಿನಿಯರ್ ಆತ್ಮಹತ್ಯೆ!
  • ಇರಾನ್‌ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ!
  • KSRTC ಬಸ್‌ನಲ್ಲಿ ಚಪ್ಪಲಿಯಲ್ಲಿ ಬಡಿದಾಡಿಕೊಂಡ ಮಹಿಳೆಯರು!
  • ನೀರು ಹೆಚ್ಚು ಸೇವಿಸಿದರೆ ರಕ್ತದೊತ್ತಡ ನಿವಾರಿಸಬಹುದೇ..?
Latest News in Kannada | Kannada News Channel | ಕನ್ನಡ ಸುದ್ದಿ | NewsX Kannada |

  • Bengaluru
  • Districts
  • Politics
  • Crime
  • National
  • International
  • Cinema
  • Health
  • Sports
  • Others
    • ASTROLOGY
    • History
    • Interviews
    • Lifestyle
    • Technology
CrimePolitics

BSY ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ!

March 15, 2024March 15, 2024 ITV Network

ಬೆಂಗಳೂರು; ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಲೈಂಗಿಕ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ.. ಬೆಂಗಳೂರಿನ ಸದಾಶಿವ ನಗರ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಇದರ  ತನಿಖೆಯ ಹೊಣೆಯನ್ನು ಸಿಐಡಿ ವರ್ಗಾವಣೆ ಮಾಡಲಾಗಿದೆ ಎಂದು ಡಿಜಿ ಹಾಗೂ ಐಜಿಪಿ ಅಲೋಕ್‌ ಮೋಹನ್‌ ಹೇಳಿದ್ದು, ಇಂದು ಅಧಿಕೃತ ಆದೇಶ ಹೊರಬೀಳಲಿದೆ.

ಇದನ್ನೂ ಓದಿ; ನಾಳೆಯೇ ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟ; ರಂಗೇರಲಿದೆ ಅಖಾಡ!

ಕಳೆದ ರಾತ್ರಿ ಮಹಿಳೆಯೊಬ್ಬರು ಸದಾಶಿವನಗರ  ಪೊಲೀಸ್‌ ಠಾಣೆಗೆ ಆಗಮಿಸಿ ಯಡಿಯೂರಪ್ಪ ವಿರುದ್ಧ ದೂರು ಕೊಟ್ಟಿದ್ದರು. ನನ್ನ 17 ವರ್ಷದ ಅಪ್ರಾಪ್ತ ಮಗಳ ಮೇಲೆ ಯಡಿಯೂರಪ್ಪ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಮಸ್ಯೆ ಹೇಳಿಕೊಂಡು ನಾನು ಹಾಗು ನನ್ನ ಮಗಳು ಫೆಬ್ರವರಿ 2 ರಂದು ಯಡಿಯೂರಪ್ಪ ಅವರ ಮನೆಗೆ ಹೋಗಿದ್ದೆವು. ಈ ವೇಳೆ ಯಡಿಯೂರಪ್ಪ ಅವರು ನನ್ನ ಮಗಳನ್ನು ಕೊಠಡಿಯೊಳಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪ ಮಾಡಿ ದೂರು ನೀಡಿದ್ದಳು. ಈ ದೂರಿನ ಹಿನ್ನೆಲೆಯಲ್ಲಿ ಸದಾಶಿವನಗರ ಠಾಣೆ ಪೊಲೀಸರು ಪೋಕ್ಸೋ ಕಾಯ್ಡೆಯಡಿ ಕೇಸ್‌ ದಾಖಲಿಸಿಕೊಂಡಿ ತನಿಖೆ ಶುರು ಮಾಡಿದ್ದರು. ಇದೀಗ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ; ಬಹುತೇಕ ಇವರಿಗೇ ಕಾಂಗ್ರೆಸ್‌ ಟಿಕೆಟ್‌ ಫೈನಲ್‌; 21 ಕ್ಷೇತ್ರಗಳಲ್ಲಿ ಯಾರ್ಯಾರಿಗೆ ಟಿಕೆಟ್‌..?

ಏನಿದು ಯಡಿಯೂರಪ್ಪ ವಿರುದ್ಧ ಆರೋಪ..?

ಫೆಬ್ರವರಿ 2ರಂದು ಸಹಾಯ ಕೇಳಿಕೊಂಡು ಯಡಿಯೂರಪ್ಪ ಬಳಿ ಹೋಗಿದ್ದೆವು. ಈ ವೇಳೆ ನನ್ನ 17 ವರ್ಷ ಮಗಳ ಮೇಲೆ ಯಡಿಯೂರಪ್ಪ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಕೇಸ್‌ ದಾಖಲಿಸಿದ್ದಾಳೆ. ಕಳೆದ ರಾತ್ರಿ ಸದಾಶಿವನಗರ ಪೊಲೀಸ್‌ ಠಾಣಗೆ ಬಂದಿರುವ ಮಹಿಳೆ ಇಂತಹದ್ದೊಂದು ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದಾಳೆ.

ಗಂಡನ ವಿರುದ್ಧವೇ ದೂರು ಕೊಟ್ಟಿದ್ದ ಮಹಿಳೆ;

ಯಡಿಯೂರಪ್ಪ ವಿರುದ್ಧ ದೂರು ಕೊಟ್ಟಿರುವ ಮಹಿಳೆ ಈ ಹಿಂದೆ ತನ್ನ ಗಂಡನ ವಿರುದ್ಧವೂ ದೂರು ಕೊಟ್ಟಿದ್ದಳು ಎಂದು ತಿಳಿದುಬಂದಿದೆ. ತನ್ನ ಗಂಡ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ಕೊಟ್ಟಿದ್ದಳು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ; ಚುನಾವಣಾ ಬಾಂಡ್‌ ಮೂಲಕ ದೇಣಿಗೆ; ಯಾವ ಪಕ್ಷಕ್ಕೆ ಎಷ್ಟು ಕೋಟಿ ಸಿಕ್ತು ಗೊತ್ತಾ..?

ಇದುವರೆಗೆ 53 ಕೇಸ್‌ಗಳನ್ನು ದಾಖಲಿಸಿರುವ ಮಹಿಳೆ;

ಬಲ್ಲ ಮೂಲಗಳ ಮಾಹಿತಿ ಪ್ರಕಾರ ಯಡಿಯೂರಪ್ಪ ವಿರುದ್ಧ ದೂರು ಕೊಟ್ಟಿರುವ ಮಹಿಳೆ ಈ ಹಿಂದೆಯೂ ಹಲವರ ವಿರುದ್ಧ ದೂರು ಕೊಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. 2015ರಿಂದೀಚೆಗೆ ಇದೇ ಮಹಿಳೆ ಒಟ್ಟು 53 ಕೇಸ್‌ಗಳನ್ನು ದಾಖಲಿಸಿದ್ದಾಳೆ. ರಾಜಕಾರಣಿಗಳು, ಉದ್ಯಮಿಗಳು, ಪೊಲೀಸ್‌ ಅಧಿಕಾರಿಗಳ ವಿರುದ್ಧವೂ ಈ ಮಹಿಳೆ ದೂರುಗಳನ್ನು ದಾಖಲಿಸಿದ್ದಾಳೆ.

ಯಡಿಯೂರಪ್ಪ ವಿರುದ್ಧದ ಆರೋಪ ನಿಜವೇ..?

ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಈಗ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದ್ರೆ ಈ ಕೇಸ್‌ ಸತ್ಯಾಸತ್ಯತೆ ಬಗ್ಗೆ ತಿಳಿಯಬೇಕಿದೆ.. ಯಾಕಂದ್ರೆ ಕಳೆದ ಎಂಟು ವರ್ಷಗಳಲ್ಲಿ ಯಡಿಯೂರಪ್ಪ ವಿರುದ್ಧ ದೂರು ಕೊಟ್ಟ ಮಹಿಳೆ ಒಟ್ಟು 53 ಕೇಸ್‌ ಗಳನ್ನು ಹಲವರ ವಿರುದ್ಧ ದಾಖಲಿಸಿದ್ದಾಳೆ. ಹೀಗಾಗಿ, ಯಡಿಯೂರಪ್ಪ ವಿರುದ್ಧದ ಪ್ರಕರಣದ ಸತ್ಯಾಸತ್ಯತೆ ಹಿರಬರಬೇಕಿದೆ.

ಇದನ್ನೂ ಓದಿ; ಬಿಡದಿ ತೋಟದ ಮನೆಯಲ್ಲಿ 25 ತಲೆ ಬರುಡೆ ಪತ್ತೆ; ಎಲ್ಲಿಂದ ಬಂದವು ಇವು..?

 

 

Share Post
  • ನಾಳೆಯೇ ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟ; ರಂಗೇರಲಿದೆ ಅಖಾಡ!
  • ಬಾಲಿವುಡ್‌ ಬಿಗ್‌ಬಿ ಅಮಿತಾಬ್‌ಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು!

You May Also Like

ಮಾರುತಿ ಓಮ್ನಿ ಮೇಲೆ ಕುಸಿದ ಮಣ್ಣಿನ ಗುಡ್ಡ!; ಬದುಕಿ ಬಂದದ್ದೇ ಪವಾಡ..!

July 18, 2024 ITV Network

ಸೋಷಿಯಲ್‌ ಮೀಡಿಯಾ ಹಾವಳಿಯಿಂದ ಬೇಸರ; ಪೊಲೀಸರ ಮೊರೆ ಹೋದ ಪರಮೇಶ್ವರ್‌

February 27, 2023 ITV Network

ಎಲ್ಲಾ ಮಹಿಳೆಯರು ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರು;

September 29, 2022 ITV Network
Copyright © 2025 Latest News in Kannada | Kannada News Channel | ಕನ್ನಡ ಸುದ್ದಿ | NewsX Kannada |. All rights reserved.
Theme: ColorMag by ThemeGrill. Powered by WordPress.