LifestyleNational

ಲಿಂಗ ಬದಲಾವಣೆ ಮಾಡಿಕೊಂಡು ಪುರುಷನಾಗಿ ಬದಲಾದ ತೆಲಂಗಾಣದ IRS ಅಧಿಕಾರಿ!

ಹೈದರಾಬಾದ್; ಹೈದರಾಬಾದ್‌ನಲ್ಲಿ ಕೆಲಸ ಮಾಡುವ ಮಹಿಳಾ IRS ಅಧಿಕಾರಿಯೊಬ್ಬರು ಲಿಂಗ ಬದಲಾವಣೆ ಮಾಡಿಕೊಂಡು ಪುರುಷರಾಗಿ ಬದಲಾಗಿದ್ದಾರೆ.. ಐಆರ್​​ಎಸ್​ ಅಧಿಕಾರಿಯಾಗಿರುವ ಎಂ.ಅನುಸೂಯಾ ಅವರು ಹೈದರಾಬಾದ್​ನ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಮುಖ್ಯ ಆಯುಕ್ತರ ಕಚೇರಿಯಲ್ಲಿ ಜಂಟಿ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ.. ಇವರೀಗ ಪುರುಷನಾಗಿ ಬದಲಾಗಿದ್ದು, ತಮ್ಮ ಹೆಸರನ್ನು ಎಂ.ಅನುಕತಿರ್‌ ಸೂರ್ಯ ಎಂದು ಬದಲಿಸಿಕೊಂಡಿದ್ದಾರೆ..

ಇದನ್ನೂ ಓದಿ; ಆಸ್ತಿ ವಿಚಾರಕ್ಕೆ ಜಗಳ!; ಸ್ವಂತ ಅಕ್ಕನ ಮೇಲೆ ಗೊಡ್ಡಲಿಯಿಂದ ದಾಳಿ!

ಅನಸೂಯಾ ಅವರು ಸರ್ಕಾರ ಮನವಿ ಮಾಡಿ ತಾನು ಲಿಂಗ ಬದಲಾವಣೆ ಮಾಡಿಕೊಂಡಿದ್ದೇನೆ. ಹೀಗಾಗಿ ನನ್ನ ಲಿಂಗ ಹಾಗೂ ಹೊಸ ಹೆಸರನ್ನು ಪರಿಗಣಿಸಬೇಕು. ಸರ್ಕಾರಿ ದಾಖಲೆಗಳಲ್ಲಿ ಹೊಸ ಹೆಸರು ಅಧಿಕೃತ ಮಾಡಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ.. ಅನಸೂಯಾ ಅವರ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಅನುಕತಿರ್‌ ಸೂರ್ಯ ಎಂದು ಗುರುತಿಸಲು ಸರ್ಕಾರ ಸೂಚನೆ ನೀಡಿದೆ..

Share Post