BengaluruHealth

ಮತ್ತೆ ಶುರುವಾಯ್ತು ಕೊರೊನಾ ಭೀತಿ; ಕರ್ನಾಟಕಕ್ಕೂ ವಕ್ಕರಿಸುವ ಸಾಧ್ಯತೆ!

ಬೆಂಗಳೂರು; ಕಳೆದ ಒಂದೂವರೆ ವರ್ಷದಿಂದ ಕೊರೊನಾ ಭೀತಿಯಿಂದ ಹೊರಗೆ ಬಂದಿದ್ದೆವು.. ಆದ್ರೆ ಈ ಹೊಸ ಉಪತಳಿ ಮತ್ತೆ ವಕ್ಕರಿಸುವ ಮುನ್ಸೂಚನೆ ಕೊಡುತ್ತಿದೆ.. ಮಹಾರಾಷ್ಟ್ರದಲ್ಲಿ ಈಗಾಗಲೇ ಕೊರೊನಾ ಉಪತಳಿ ಕೆಪಿ2 ಕಾಣಿಸಿಕೊಂಡಿದೆ.. ಹಲವರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಈ ಸೋಂಕು ವಕ್ಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..

ಕೆಪಿ2 ಕೊರೊನಾ ಉಪತಳಿ ಕೊರೊನಾ ವೈರಸ್​​ನ ಒಮಿಕ್ರಾನ್ ಜೆಎನ್​​.1 ತಳಿಯ ವಂಶದ್ದಾಗಿದೆ.. ಅಮೆರಿಕಾ ಮತ್ತು ಬ್ರಿಟನ್​​​ನಂತಹ ದೇಶಗಳಲ್ಲಿ ಇದರ ಹಾವಳಿ ಹೆಚ್ಚಾಗಿದೆ.. ಕೆಪಿ2 ಅತಿವೇಗವಾಗಿ ಒಬ್ಬರಿಂದ ಒಬ್ಬರಿಗೆ ಹರಡುವ ಕೊರೊನಾ ತಳಿಯಾಗಿದೆ.. ಆದ್ರೆ ಜೀವಕ್ಕೆ ಅಷ್ಟೇನೂ ಅಪಾಯಕಾರಿಯಲ್ಲ.. ಈ ಹೊಸ ತಳಿಯ ಬಗ್ಗೆ ಹೆಚ್ಚು ಆತಂಕಪಡಬೇಕಿಲ್ಲ. ಎಲ್ಲಾ ವೈರಸ್‌ಗಳು ರೂಪಾಂತರಗೊಳ್ಳುತ್ತವೆ. ಇದು ಜೆಎನ್​​​.1 ರೂಪಾಂತರವಾಗಿದ್ದು ಜ್ವರ, ಕೆಮ್ಮು ಮತ್ತು ಆಯಾಸ ಕಾಣಿಸಿಕೊಳ್ಳುತ್ತದೆ.. ಇದರಿಂದ ಜೀವಕ್ಕೆ ಅಪಾಯವಿಲ್ಲ.. ಹಿಂದಿನ ಕೆಲ ತಳಿಗಳಂತೆ ಅದಷ್ಟಕ್ಕದೇ ನಾಶವಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ..

 

Share Post