LifestyleNational

ಸಮಾಧಿ ಮೇಲಿದೆ ಕ್ಯೂಆರ್‌ ಕೋಡ್‌!; ಸ್ಕ್ಯಾನ್‌ ಮಾಡಿ ನೋಡಿ…!

ತ್ರಿಶ್ಯೂರ್‌; ಕೇರಳದ ತ್ರಿಶೂರ್ ಜಿಲ್ಲೆಯ ಕುರಿಯಾಚಿರಾ ಪಟ್ಟಣದಲ್ಲಿರುವ ಸೇಂಟ್ ಜೋಸೆಫ್ ಚರ್ಚ್‌ಗೆ ಭೇಟಿ ನೀಡುವ ಯಾರಾದರೂ ಅಲ್ಲಿನ ಸಮಾಧಿಯೊಂದು ಕಂಡ ಕೂಡಲೇ ಒಂದು ಕ್ಷಣ ನಿಲ್ಲುತ್ತಾರೆ. ಏಕೆಂದರೆ ಆ ಸಮಾಧಿಯ ಮೇಲೆ ದೊಡ್ಡ ಗಾತ್ರದ ಕ್ಯೂಆರ್ ಕೋಡ್ ಇದೆ. ಅದನ್ನು ನೋಡಿ ಎಷ್ಟೋ ಜನ ಅಚ್ಚರಿಗೊಳಗಾಗಿದ್ದಾರೆ.

ಇದನ್ನೂ ಓದಿ; ವಿಧಾನಸಭೆಯಲ್ಲಿ ನೀಟ್‌ ಪರೀಕ್ಷೆ ರದ್ದು ನಿರ್ಣಯ ಅಂಗೀಕಾರ!

QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ, ಜನರು ಅಚ್ಚರಿಗೊಳಗಾಗೊಂದಂತೂ ಸತ್ಯ. ಇನ್ನು ಕೆಲವರು ಅದರಲ್ಲಿನ ವಿವರಗಳನ್ನು ನೋಡಿ ಭಾವುಕರಾಗುತ್ತಿದ್ದಾರೆ ಕೂಡಾ.  ಇದು 26 ನೇ ವಯಸ್ಸಿನಲ್ಲಿ ಅಕಾಲಿಕ ಮರಣ ಹೊಂದಿದ ಯುವ ವೈದ್ಯ ಐವಿನ್ ಫ್ರಾನ್ಸಿಸ್ ಅವರ ಸಮಾಧಿ. ಅದರ ಮೇಲಿನ ಈ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ಡಾ. ಐವಿನ್ ಅವರ ಜೀವನ ಮತ್ತು ಅವರ ಸೃಜನಶೀಲ ಪ್ರತಿಭೆಯ ಕುರಿತು ವೀಡಿಯೊಗಳನ್ನು ನೀವು ನೋಡಬಹುದು.

ಇದನ್ನೂ ಓದಿ; ಬಿಜೆಪಿ ಮೇಯರ್‌ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ ಮಹಿಳೆ!

ವೈದ್ಯನಾಗಿ ಉತ್ಕೃಷ್ಟ ಭವಿಷ್ಯ ಹೊಂದಿದ್ದ ಮಗನನ್ನು ಚಿಕ್ಕವಯಸ್ಸಿನಲ್ಲೇ ಕಳೆದುಕೊಂಡು ಕಂಗಾಲಾಗಿದ್ದ ಪಾಲಕರು ಐವಿನ್ ನೆನಪುಗಳನ್ನು ಜೀವಂತವಾಗಿರಿಸುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಿದ್ದಾರೆ. ಡಾ. ಐವಿನ್ ಅವರ ಕುಟುಂಬವು ಅವರ ಜೀವನದ ಮುಖ್ಯಾಂಶಗಳೊಂದಿಗೆ ವೆಬ್ ಸೈಟ್‌ ಒಂದರನ್ನು ತೆರೆದಿದೆ. ಜೊತೆಗೆ ಅದನ್ನು QR ಕೋಡ್‌ನೊಂದಿಗೆ ಲಿಂಕ್ ಮಾಡಿದೆ. ನೀವು ಈ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ನೀವು ಐವಿನ್ ಅವರ ಚಿತ್ರಗಳು, ಅವರು ಕಾಲೇಜಿನಲ್ಲಿ ನೀಡಿದ ಕೀಬೋರ್ಡ್ ಮತ್ತು ಗಿಟಾರ್ ಪ್ರದರ್ಶನಗಳು ಮತ್ತು ಸ್ನೇಹಿತರ ವಿವರಗಳನ್ನು ನೋಡಬಹುದು.

Share Post