ಬೀದಿನಾಯಿಗಳೊಂದಿಗೆ ಹೋರಾಡಿ ಮಕ್ಕಳನ್ನು ರಕ್ಷಿಸಿದ ತಾಯಿ
ಉತ್ತರಪ್ರದೇಶ: ಆರು ಬೀದಿನಾಯಿಗಳ ಹಿಂಡಿನೊಂದಿಗೆ ಹೋರಾಡಿ ತನ್ನ ಮೂವರು ಮಕ್ಕಳನ್ನು ರಕ್ಷಿಸಿರುವ ಘಟನೆ ಉತ್ತರಪ್ರದೇಶದ ಪಿಲಿಭಿತ್ ನಗರದಲ್ಲಿ ನಡೆದಿದೆ. ತಾಯಿ ಸೀಮಾ ಒಳಗೆ ಅಡುಗೆ ಮಾಡುತ್ತೊಇರುವ ಹೊರಗೆ ಆಟವಾಡುತ್ತಿದ್ದ ತನ್ನ ಮಕ್ಕಳು ಕಿರುಚಾಡುತ್ತಿದ್ದ ಶಬ್ದ ಕೇಳಿ ಹೊರ ಬಂದಿದ್ದಾಳೆ. ಅಷ್ಟರಲ್ಲಾಗಲೇ ತನ್ನ ಐದು ವರ್ಷದ ಮಗಳು ಪಲ್ಲವಿಯನ್ನು ನಾಯಿಗಳು ಎಳೆದಾಡುತ್ತಿವೆ.
ಇನ್ನಬ್ಬರು ಮಕ್ಕಳಾದ ಅನುಜ್ ಮತ್ತು ಮೋನುರ ಮೇಲು ನಾಯಿಗಳು ಬೊಗಳಲು ಶುರುಮಾಡಿವೆ. ತಾನು ಗರ್ಭಿಣಿ ಎನ್ನುವುದನ್ನು ನೋಡದೆ ಸೀಮಾ ನಾಯಿಗಳ ಹಿಂಡಿನೊಂದಿಗೆ ಮಕ್ಕಳನ್ನು ಕಾಪಾಡಲು ಸತತ ಪ್ರಯತ್ನ ಪಟ್ಟಿದ್ದಾಳೆ. ಈವೇಳೆ ಸೀಮಾ ಮೇಲೂ ನಾಯಿಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ. ಸೀಮಾ ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ನಾಯಿಗಳು ಅಲ್ಲಿಂದ ಹೋಗುವವರೆಗೂ ಅವುಗಳೊಂದಿಗೆ ಕಾದಾಡಿದ್ದಾಳೆ.
ಗಂಭೀರ ಗಾಯಗೊಂಡ ಸೀಮಾ ಮತ್ತು ಮಗಳು ಪಲ್ಲವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ನಾಯಿಗಳನ್ನು ಹಿಡಿಯಲು ನಗರಸಭೆಗೆ ಅಭಿಯಾನ ಮಾಡುವುದಾಗಿ ತಿಳಿಸಿದ್ರು.