Technology

ಪ್ರಳಯ್‌ ಖಂಡಾಂತರ ಕ್ಷಿಪಣಿ ಪ್ರಯೋಗ ಯಶಸ್ವಿ

ಬಾಲಾಸೋರ್: ಸ್ವದೇಶಿ ನಿರ್ಮಿತ ಸೀಮಿತ ದೂರ ತಲುಪಬಲ್ಲ ಪ್ರಳಯ್ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಯಶಸ್ವಿಯಾಗಿ ನಡೆಸಿತು. ಒಡಿಶಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪ ಪ್ರದೇಶದಿಂದ ಬೆಳಗ್ಗೆ 10.30ರ ವೇಳೆಗೆ ಪರೀಕ್ಷಾರ್ಥ ಪ್ರಯೋಗ ನಡೆಯಿತು. ಈ ಪ್ರಯೋಗ ಯಶಸ್ವಿಯಾಯಿತೆಂದು ಡಿಆರ್‌ಡಿಒ ಅಧಿಕಾರಿಗಳು ತಿಳಿಸಿದ್ದಾರೆ.
500ರಿಂದ 1000 ಕೆ.ಜಿ. ತೂಕದ ಸಿಡಿತಲೆ ಹೊತ್ತು ಸಾಗುವ ಸಾಮರ್ಥ್ಯದ ಪ್ರಳಯ್ ಕ್ಷಿಪಣಿ, 350ರಿಂದ 500 ಕಿ.ಮೀ. ವರೆಗಿನ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ. ಪ್ರಳಯ್‌ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿರುವ ಬಗ್ಗೆ ಡಿಆರ್‌ಡಿಒ ಟ್ವಿಟರ್‌ ಬರೆದುಕೊಂಡಿದ್ದು, ವಿಡಿಯೋ ಕೂಡಾ ಅಪ್‌ಲೋಡ್‌ ಮಾಡಲಾಗಿದೆ.

Share Post