Health

ವ್ಯಾಕ್ಸಿನ್‌ ಹಾಕಿಸದಿದ್ದರೆ ಸಂಬಳ ಇಲ್ಲ; ಪಂಜಾಬ್‌ ಸರ್ಕಾರದ ಮಹತ್ವದ ಘೋಷಣೆ

ಎರಡೂ ಡೋಸ್‌ ವ್ಯಾಕ್ಸಿನ್‌ ಹಾಕಿಸಿಕೊಳ್ಳದಿದ್ದರೆ ಸಂಬಳ ತಡೆ ಹಿಡಿಯಲು ಪಂಜಾಬ್‌ ಸರ್ಕಾರ ತೀರ್ಮಾನಿಸಿದೆ. ಸರ್ಕಾರಿ ನೌಕರರು ಎರಡೂ ಡೋಸ್‌ ಲಸಿಕೆ ಹಾಕಿಸಿಕೊಳ್ಳಲೇಬೇಕು. ಲಸಿಕೆ ಹಾಕಿಸಿಕೊಳ್ಳದೇ ಹೋದರೆ ಅಂತಹವರ ಸಂಬಲ ತಡೆಹಿಡಿಯುತ್ತೇವೆ ಎಂದು ಪಂಜಾಬ್‌ ಸರ್ಕಾರ ಅದೇಶ ಹೊರಡಿಸಿದೆ.

ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡ ಮೇಲೆ IHRMS portal ನಲ್ಲಿ ಲಸಿಕೆ ಹಾಕಿಸಿಕೊಂಡ ಬಗ್ಗೆ ದೃಢಪಡಿಸುವ ಸರ್ಟಿಫಿಕೇಟ್‌ ಅಪ್‌ಲೋಡ್‌ ಮಾಡಬೇಕು. ಸರ್ಟಿಫಿಕೇಟ್‌ ಅಪ್‌ಲೋಡ್‌ ಮಾಡದೆ ಹೋದರೆ ಸಂಬಳ ಸಿಗುವುದಿಲ್ಲ ಎಂದು ಎಚ್ಚರಿಸಲಾಗಿದೆ.

Share Post