ಪೊದೆಯಲ್ಲಿ ಸಿಕ್ಕ ಸೂಟ್‌ಕೇಸ್‌ನಲೇನಿತ್ತು..?; ಆ ಮಹಿಳೆ ಮಾಡಿದ್ದಾದ್ರೂ ಏನು..?
ಮುಜಾಫರ್‌ಪುರ್; ತಾಯಿಯನ್ನು ದೇವರಿಗೆ ಸಮ ಅಂತಾರೆ.. ಕೆಲ ತಾಯಂದಿರುವ ರಾಕ್ಷಸಿಯರೂ ಆಗಿರುತ್ತಾರೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.. ಇದಕ್ಕೆ ಮತ್ತೊಂದು ಸೇರ್ಪಡೆ ಈ ಸುದ್ದಿ.. ತನ್ನ ಪ್ರಿಯಕರನ ಜೊತೆ ಹೋಗೋದಕ್ಕೆ ಅಡ್ಡಿಯಾಗುತ್ತಿದೆ ಎಂದು ಮಹಿಳೆಯೊಬ್ಬಳು ತನ್ನ ಮೂರು ವರ್ಷ ಮಗುವನ್ನು ಕೊಂದಿದ್ದಾಳೆ.. ಸೂಟ್‌ಕೇಸ್‌ನಲ್ಲಿ ಮಗುವನ್ನು ಮುಚ್ಚಿಟ್ಟು, ಅದನ್ನು ನಿರ್ಜನ ಪ್ರದೇಶದಲ್ಲಿ ಬಿಸಾಕಿದ್ದಾಳೆ.. ಬಿಹಾರದ ಮುಜಾಫರ್‌ಪುರದಲ್ಲಿ ಈ ಘಟನೆ ನಡೆದಿದೆ..
ಇದನ್ನೂ ಓದಿ; ದರ್ಶನ್ ಬಳ್ಳಾರಿ ಜೈಲಿಗೆ, ಪವಿತ್ರಾ ಗೌಡ ಎಲ್ಲಿಗೆ..?
ಇಲ್ಲಿನ ವಾಸಿ ಕಾಜಲ್ ಎಂಬಾಕೆಗೆ ಮದುವೆಯಾಗಿ ಮೂರು ವರ್ಷದ ಮಗು ಕೂಡಾ ಇತ್ತು.. ಆದ್ರೆ ಈಕೆ ವಿವಾಹೇತರ ಸಂಬಂಧ ಹೊಂದಿದ್ದಳು.. ಗಂಡ ಕೆಲಸಕ್ಕೆ ಹೋಗುತ್ತಿದ್ದಂತೆ ಆಕೆ ಪ್ರಿಯಕರನ ಜೊತೆ ತಿರುಗಾಡೋಕೆ ಶುರು ಮಾಡಿದ್ದಳು.. ಆದ್ರೆ ಪ್ರಿಯಕರನ ಜೊತೆಗೆ ಆರಾಮಾಗಿ ಓಡಾಡೋದಕ್ಕೆ ಮೂರು ವರ್ಷದ ಮಗು ಅಡ್ಡಿಯಾಗಿದೆ ಎಂದು ಆಕೆ ಮಗುವನ್ನು ಕೊಲೆ ಮಾಡಿದ್ದಾಳೆ.. ನಂತರ ಅದನ್ನು ಸೂಟ್‌ಕೇಸ್ ಒಂದರಲ್ಲಿ ತುಂಬಿ ನಿರ್ಜನ ಪ್ರದೇಶದಲ್ಲಿ ಬಿಸಾಡಿದ್ದಾಳೆ..
ಇದನ್ನೂ ಓದಿ; ಟೆಸ್ಟ್ ಡ್ರೈವ್‌ಗೆ ಬೆಂಜ್ ಕಾರು ತೆಗೆದುಕೊಂಡು ಹೋದವಳು ಮಾಡಿದ್ದೇನು..?
ಮಹಿಳೆ ವಾಸವಿದ್ದ ಮನೆಯ ಸಮೀಪದ ಪೊದೆಯೊಂದರಲ್ಲಿ ಸೂಟ್‌ಕೇಸ್ ಪತ್ತೆಯಾಗಿತ್ತು.. ಅದನ್ನು ಪರಿಶೀಲಿಸಿದಾಗ ಅದರಲ್ಲಿ ಮೂರು ವರ್ಷದ ಮಗು ಪತ್ತೆಯಾಗಿತ್ತು.. ಅದರ ಕತ್ತು ಕುಯ್ಯಲಾಗಿತ್ತು.. ಪೊಲೀಸರಿಗೆ ಮುದಲಿಗೆ ತಾಯಿಯ ಮೇಲೆಯೇ ಅನುಮಾನ ಬಂದು ವಿಚಾರಣೆ ನಡೆಸಿದ್ದಾರೆ.. ಈ ವೇಳೆ ನಿಜ ಏನು ಅನ್ನೋದನ್ನು ಆಕೆ ಒಪ್ಪಿಕೊಂಡಿದ್ದಾಳೆ.. ಈಕೆ ಕ್ರೈಂ ಪ್ಯಾಟ್ರೋಲ್ ಎಂಬ ಕಾರ್ಯಕ್ರಮ ನೋಡಿ ಈ ಕೆಲಸ ಮಾಡಿದ್ದಾಳೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ನಾಳೆಯೇ ಹೈಕೋರ್ಟ್‌ನಲ್ಲಿ ಸಿದ್ದರಾಮಯ್ಯ ಪ್ರಕರಣದ ವಿಚಾರಣೆ
ಮಗುವನ್ನು ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿಟ್ಟು ಬಿಸಾಕಿದ್ದ ಮಹಿಳೆ ಕಾಜಲ್ ಮನೆಗೆ ವಾಪಸ್ ಬಂದಿರಲಿಲ್ಲ.. ಹೀಗಾಗಿ ಗಂಡನಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದರು.. ಆಕೆಯ ಮೊಬೈಲ್ ಲೊಕೇಷನ್ ಟ್ರೇಸ್ ಮಾಡಿದಾಗ ಆಕೆ ಪ್ರಿಯಕರ ಮನೆಯಲ್ಲಿದ್ದದ್ದು ಗೊತ್ತಾಗಿದೆ.. ಈಗ ಇಬ್ಬರನ್ನೂ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ..